ದಿಲ್ಲಿಯತ್ತ ನೋಡಿದ್ದರೆ ಸಾಜದ್ ಲೋನ್ ಜಮ್ಮು-ಕಾಶ್ಮೀರ ಸಿಎಂ ಆಗುತ್ತಿದ್ದರು: ರಾಜ್ಯಪಾಲ ಮಲೀಕ್
ದಿಲ್ಲಿಯತ್ತ ನೋಡಿದ್ದರೆ ಸಾಜದ್ ಲೋನ್ ಜಮ್ಮು-ಕಾಶ್ಮೀರ ಸಿಎಂ ಆಗುತ್ತಿದ್ದರು: ರಾಜ್ಯಪಾಲ ಮಲೀಕ್

ದಿಲ್ಲಿಯತ್ತ ನೋಡಿದ್ದರೆ ಸಾಜದ್ ಲೋನ್ ಜಮ್ಮು-ಕಾಶ್ಮೀರ ಸಿಎಂ ಆಗುತ್ತಿದ್ದರು: ರಾಜ್ಯಪಾಲ ಮಲೀಕ್

ಸತ್ಯಪಾಲ್ ಮಲೀಕ್ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟುಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ.
ಗ್ವಾಲಿಯರ್: ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ಏಕಾಏಕಿ ವಿಸರ್ಜನೆ ಮಾಡಿರುವ ರಾಜ್ಯಪಾಲ ಸತ್ಯಪಾಲ್ ಮಲೀಕ್ ನಡೆಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಈ ನಡುವೆ ಸತ್ಯಪಾಲ್ ಮಲೀಕ್ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟುಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. 
ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೇಳಿಕೆ ನೀಡಿರುವ ಸತ್ಯಪಾಲ್ ಮಲೀಕ್, "ನಾನು ದಿಲ್ಲಿಯತ್ತ ನೋಡಿದ್ದರೆ ಸಾಜದ್ ಲೋನ್ ಜಮ್ಮು-ಕಾಶ್ಮೀರದ ಸಿಎಂ ಆಗಿರುತ್ತಿದ್ದರು, ಇತಿಹಾಸದಲ್ಲಿ ನನ್ನನ್ನು ಅಪ್ರಾಮಾಣಿಕ ವ್ಯಕ್ತಿಯೆಂದು ಗುರುತಿಸಲಾಗುತ್ತಿತ್ತು ಎಂದು ಸತ್ಯಪಾಲ್ ಮಲೀಕ್ ಹೇಳಿದ್ದಾರೆ. 
ನ್ಯಾಷನಲ್ ಕಾನ್ಫರೆನ್ಸ್ ನ ಬಾಹ್ಯ ಬೆಂಬಲ ಪಡೆದು ಕಾಂಗ್ರೆಸ್-ಪಿಡಿಪಿ ಸರ್ಕಾರ ರಚನೆಗೆ ಮೆಹಬೂಬಾ ಮುಫ್ತಿ ರಾಜ್ಯಪಾಲರಿಗೆ ಪತ್ರ ಬರೆದಿದ್ದ ಸಂದರ್ಭದಲ್ಲೇ ಪೀಪಲ್ಸ್ ಕಾನ್ಫರೆನ್ಸ್ ನ ಶಾಸಕ ಸಾಜದ್ ಲೋನ್ ಬಿಜೆಪಿ ಶಾಸಕರು ಹಾಗೂ ಇನ್ನೂ ಕೆಲವು ಪಕ್ಷಗಳ ಶಾಸಕರ ಬೆಂಬಲ ಹೊಂದಿದ್ದು ಸರ್ಕಾರ ರಚನೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಸತ್ಯಪಾಲ್ ಮಲೀಕ್ ವಿಧಾನಸಭೆಯನ್ನು ವಿಸರ್ಜಿಸುವ ನಿರ್ಣಯ ಕೈಗೊಂಡಿದ್ದರು. 
ಗ್ವಾಲಿಯರ್ ನಲ್ಲಿ ಐಟಿಎಂ ವಿವಿಯ ಪ್ರೀ ಕಾನ್ವೊಕೇಷನ್ ಅಕಾಡೆಮಿಕ್ ಕಾನ್ಕ್ಲೇವ್ ನಲ್ಲಿ ಮಾತನಾಡಿ, ವಿಧಾನಸಭೆ ವಿಸರ್ಜನೆಯ ಕ್ರಮವನ್ನು ಸಮರ್ಥಿಸಿಕೊಂಡಿರುವ ಸತ್ಯಪಾಲ್ ಮಲೀಕ್, ನಾನು ತೆಗೆದುಕೊಂಡ ನಿರ್ಧಾರಕ್ಕೆ ನನ್ನನ್ನು ಯಾರು ಬೇಕಾದರೂ ನಿಂದಿಸಬಹುದು ಆದರೆ ನಾನು ಮಾಡಿದ್ದು ಸರಿ ಇದೆ ಎಂದು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com