ಮೇಕೆದಾಟು ಯೋಜನೆ: ಅನುಮತಿ ಹಿಂಪಡೆಯುವಂತೆ ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದ್ದು, ಮೇಕೆದಾಟು ಯೋಜನಾ-ಪೂರ್ವ ಕಾರ್ಯ....
ಪಳನಿಸ್ವಾಮಿ
ಪಳನಿಸ್ವಾಮಿ
ನವದೆಹಲಿ: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದ್ದು, ಮೇಕೆದಾಟು ಯೋಜನಾ-ಪೂರ್ವ ಕಾರ್ಯ ಸಾಧ್ಯತಾ ವರದಿಗೆ ಕೇಂದ್ರ ಜಲ ಆಯೋಗ ಸಮ್ಮತಿ ಸೂಚಿಸಿದ್ದು, ಅದನ್ನು ಹಿಂಪಡೆಯುವಂತೆ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ಸೂಚಿಸಿದ್ದು, ಇದು ತಮಿಳುನಾಡು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಯೋಜನೆ ಕೈಗೆತ್ತಿಕೊಂಡಿರುವುದು ಕುಡಿಯುವ ನೀರಿಗಾಗಿ ಅಲ್ಲ. ಇದರಿಂದ ಕಾವೇರಿ ಜಲಾನಯನ ಪ್ರದೇಶಕ್ಕೂ ಹಾನಿಯಾಗುತ್ತದೆ. ಅಲ್ಲದೆ ಇದು ಕಾವೇರಿ ನ್ಯಾಯಾಧಿಕರಣದ ವಿರುದ್ಧವಾಗಿದೆ. ಹಾಗಾಗಿ ಆದೇಶ ಹಿಂಪಡೆಯುವಂತೆ ಜಲ ಆಯೋಗಕ್ಕೆ ಸೂಚಿಸಬೇಕೆಂದು ಪಳನಿಸ್ವಾಮಿ ಪ್ರಧಾನಿ ಪತ್ರ ಬರೆದು ಮನವಿ ಮಾಡಿದ್ದಾರೆ.
ಯೋಜನೆಗೆ ಸಂಬಂಧಪಟ್ಟಂತೆ ಪ್ರಧಾನಿಯವರು ಮಧ್ಯ ಪ್ರವೇಶಿಸಬೇಕು ಹಾಗೂ ಯೋಜನೆಗೆ ತಡೆ ನೀಡಬೇಕೆಂದು ತಮಿಳುನಾಡು ಸಿಎಂ ಪತ್ರದಲ್ಲಿ ಕೋರಿದ್ದಾರೆ.
ಈ ಸಂಬಂಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಲು ಮುಂದಾಗಿದ್ದು, ನ್ಯಾಯಾಲಯಕ್ಕೆ ನಾಳೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯದ ಯೋಜನೆಗೆ ತಮಿಳುನಾಡು ಆರಂಭದಿಂದಲೇ ತಗಾದೆ ತೆಗೆಯುತ್ತಿದೆ. ಆದರೆ, ಕೇಂದ್ರ ಜಲ ಆಯೋಗ, ರಾಜ್ಯ ಸಲ್ಲಿಸಿದ್ದ ಯೋಜನೆಯ ಪೂರ್ವ ಸಾಧ್ಯತಾ ವರದಿಗೆ ಒಪ್ಪಿಗೆ ಸೂಚಿಸಿದೆ. ಅಲ್ಲದೆ ಯೋಜನೆಯ ಸಂಪೂರ್ಣ ವರದಿಯನ್ನು ಕಳುಹಿಸಬೇಕು ಹಾಗೂ ಕರ್ನಾಟಕದಿಂದ ತಮಿಳುನಾಡಿಗೆ ಪ್ರತಿ ವರ್ಷ ಬಿಡುವ ಕಾವೇರಿ ನೀರು ಯಥಾವತ್‌ ಆಗಿರಬೇಕು ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com