ಕೃಷಿ ಕ್ಷೇತ್ರದ ಮೇಲೆ ನೋಟು ನಿಷೇಧದ ಪರಿಣಾಮ: ಕೃಷಿ ಇಲಾಖೆ ಯುಟರ್ನ್!

ಕೃಷಿ ಕ್ಷೇತ್ರದ ಮೇಲೆ ನೋಟು ನಿಷೇಧ ಪ್ರತಿಕೂಲ ಪರಿಣಾಮ ಬೀರಿತ್ತು ಎಂದು ಸಂಸತ್ ಸಮಿತಿಗೆ ಮಂಡಿಸಿದ್ದ ವರದಿಯಲ್ಲಿ ಹೇಳಿದ್ದ ಕೃಷಿ ಇಲಾಖೆ ಈಗ ಏಕಾ ಏಕಿ ಯು-ಟರ್ನ್ ಹೊಡೆದಿದೆ.
ಕೃಷಿ ಕ್ಷೇತ್ರದ ಮೇಲೆ ನೋಟು ನಿಷೇಧದ ಪರಿಣಾಮ: ಕೃಷಿ ಇಲಾಖೆ ಯುಟರ್ನ್!
ಕೃಷಿ ಕ್ಷೇತ್ರದ ಮೇಲೆ ನೋಟು ನಿಷೇಧದ ಪರಿಣಾಮ: ಕೃಷಿ ಇಲಾಖೆ ಯುಟರ್ನ್!
ನವದೆಹಲಿ: ಕೃಷಿ ಕ್ಷೇತ್ರದ ಮೇಲೆ ನೋಟು ನಿಷೇಧ ಪ್ರತಿಕೂಲ ಪರಿಣಾಮ ಬೀರಿತ್ತು ಎಂದು ಸಂಸತ್ ಸಮಿತಿಗೆ ಮಂಡಿಸಿದ್ದ ವರದಿಯಲ್ಲಿ ಹೇಳಿದ್ದ ಕೃಷಿ ಇಲಾಖೆ ಈಗ ಏಕಾ ಏಕಿ ಯು-ಟರ್ನ್ ಹೊಡೆದಿದೆ. 
ಕಳೆದ ವಾರ ಸಲ್ಲಿಸಿದ್ದ ವರದಿಯಲ್ಲಿ ನೋಟು ನಿಷೇಧದಿಂದ ಕೃಷಿಕರ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ವಿವರಣೆ ನೀಡಿದ್ದ ಇಲಾಖೆ, 500-1000 ರೂಪಾಯಿ ನೋಟುಗಳ ನಿಷೇಧದಿಂದ 2016 ನೇ ಸಾಲಿನ ಚಳಿಗಾಳದ ಬೆಳೆಗಳಿಗೆ ಗೊಬ್ಬರ ಹಾಗೂ ಬೀಜಗಳನ್ನು ಖರೀದಿಸುವುದಕ್ಕೆ ಸಂಕಷ್ಟ ಎದುರಿಸಬೇಕಾಯಿತು ಎಂದು ಹೇಳಿತ್ತು. ಆದರೆ ನ.27 ರಂದು ಸಲ್ಲಿಕೆ ಮಾಡಿರುವ ವರದಿಯಲ್ಲಿ ಯು-ಟರ್ನ್ ಹೊಡೆದಿದೆ. "ಕಳೆದ ವಾರ ತಾನು ಉಲ್ಲೇಖಿಸಿದ್ದ ಮಾಹಿತಿ ರಾಷ್ಟ್ರೀಯ ಬೀಜ ಕಾರ್ಪೊರೇಷನ್ ನ ಅಧ್ಯಕ್ಷರ ಹೇಳಿಕೆಯ ಆಧಾರಿತವಾಗಿದ್ದು, ಬೇರೆ ಮೂಲಗಳಿಂದ ಬೀಜ ವಿತರಣೆಯಾಗಿರುವುದನ್ನು ಪರಿಗಣಿಸಿರಲಿಲ್ಲ ಎಂದು ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಿದ್ದು ವಾಸ್ತವದಲ್ಲಿ ನೋಟು ನಿಷೇಧದಿಂದ ರೈತರಿಗೆ ಲಾಭವಾಗಿದೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com