ನವದೆಹಲಿ: ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಕುಮಾರ್ ಜೈನ್ ಅವರ ಕಾನೂನು ಬಾಹಿರ ಆಸ್ತಿ ವಶಪಡಿಸಿಕೊಳ್ಳಲು ಸಿಬಿಐಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೈನ್ ಕಳೆದ ಐದು ವರ್ಷಗಳಿಂದ ದೆಹಲಿಯ ಸುತ್ತಮುತ್ತ 200 ಬಿಘಾಸ್ (1 ಎಕರೆ= 4 ಬಿಘಾ) ಕೃಷಿ ಭೂಮಿಯನ್ನು ಬೇರೆ ಬೇರೆ ಸಂಸ್ಥೆಗಳ ಹೆಸರಲ್ಲಿ ಖರೀದಿಸಿದ್ದಾರೆ. ಅವರು ಇದಕ್ಕಾಗಿ ಹಲವಾರು ಕೋಟಿ ರೂಪಾಯಿಗಳ ಅಕಪ್ಪು ಹಣವನ್ನು ಬಳಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
2017 ರ ಆಗಸ್ಟ್ 24 ರಂದು ಸಿಬಿಐ ಈ ಸಂಬಂಧ ಪ್ರಕರಣ ದಾಖಲಿಸಿತ್ತು. ಇದೀಗ ಕೇಂದ್ರ ಗೃಹ ವ್ಯವಹಾರ ಸಚಿವಾಲಯವು ಜೈನ್ ಅವರ ಅಕ್ರಮ ಆಸ್ತಿಯ ವಶಕ್ಕೆ ಅನುಮತಿ ನೀಡಿದೆ.