ಎಸ್ಪಿ ಮಾಜಿ ನಾಯಕ ಅಮರ್ ಸಿಂಗ್ ರಿಂದ ಆರ್ ಎಸ್ ಎಸ್ ಗೆ ಕೋಟ್ಯಂತರ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ ದಾನ!

ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ತನ್ನ ಕೋಟ್ಯಂತರ ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಅಜಂಗಢದ ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ಸೇರಿದ ಸೇವಾ ಭಾರತ ಸಂಸ್ಥೆಗೆ ದಾನ ಮಾಡಿದ್ದಾರೆ.
ಅಮರ್ ಸಿಂಗ್
ಅಮರ್ ಸಿಂಗ್

ಲಖನೌ:  ಸಮಾಜವಾದಿ ಪಕ್ಷದ ಮಾಜಿ ನಾಯಕ  ಅಮರ್ ಸಿಂಗ್  ತನ್ನ ಕೋಟ್ಯಂತರ ರೂ.ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಅಜಂಗಢದ ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ಸೇರಿದ ಸೇವಾ ಭಾರತ ಸಂಸ್ಥೆಗೆ ದಾನ ಮಾಡಿದ್ದಾರೆ.

ಎಸ್ಪಿ ಪಕ್ಷದ ಮಾಜಿ ಕಾರ್ಯದರ್ಶಿ ಅಮರ್ ಸಿಂಗ್  ಅಜಂಗಢದ ತರ್ವಾನ್ ಬಳಿಯಲ್ಲಿನ 10 ಕೋಟಿ. ರೂ. ಮೌಲ್ಯದ  ಭೂಮಿ, 4 ಕೋಟಿ ಮೌಲ್ಯದ ಪೂರ್ವಜರ  ಕಾಲದ ಮನೆ ಸೇರಿದಂತೆ  15 ಕೋಟಿ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಸೇವಾ ಭಾರತಿ ಸಂಸ್ಥೆಗೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

 ಆರ್ ಎಸ್ ಎಸ್ ಮೂಲಕ ಬಿಜೆಪಿಗೆ ಸೇರಿಕೊಳ್ಳಲು ಅಮರ್ ಸಿಂಗ್ ದಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ  ಪ್ರತಿಕ್ರಿಯಿಸುವುದಿಲ್ಲ ಎಂದಿರುವ ಅಮರ್ ಸಿಂಗ್ , ಸಮಾಜ ಸೇವೆ  ಹಾಗೂ ತಮ್ಮ ಪೂರ್ವಜರ ನೆನಪಿನಲ್ಲಿ ಆಸ್ತಿ ದಾನ ಮಾಡಿರುವುದಾಗಿ  ಹೇಳಿದ್ದಾರೆ.

 ಅಜಂಗಡದ ಅಮರ್ ಸಿಂಗ್, ಮುಲಾಯಂ ಸಿಂಗ್ ಅವಧಿಯಲ್ಲಿ  ಜಿಲ್ಲೆಯ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2010ರಲ್ಲಿ ಎಸ್ಪಿಯಿಂದ ಹೊರಬಂದು ಅಮರ್ ಸಿಂಗ್ ರಾಷ್ಟ್ರೀಯ ಲೋಕ ಮಂಚ್ ಎಂಬ ಹೆಸರಿನಲ್ಲಿ ಪುರ್ವಾಂಚಲಕ್ಕಾಗಿ ಒತ್ತಾಯಿಸಿದರು.
2012 ರ ಉತ್ತರ ಪ್ರದೇಶ ಚುನಾಣೆಯಲ್ಲಿ ತಮ್ಮ ಪಕ್ಷದಿಂದ 360 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆದರೆ. ಒಂದೇ ಒಂದು ಸ್ಥಾನ ಗೆಲ್ಲುವಲ್ಲಿ ವಿಫಲವಾಗಿದ್ದರು. ಅಜಂಗಢದಲ್ಲಿ ಗೆಲ್ಲುವಲ್ಲಿ ವಿಫಲರಾದ ಬಳಿ ರಾಜಕೀಯದಿಂದ ಹೊರಬಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com