ತಿರುವನಂತಪುರ: ಕಳೆದ ಆಗಸ್ಟ್ ನಲ್ಲಿ ಸಂಭವಿಸಿದ ಭೀಕರ ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗಿದ್ದ ನೆರವಾದ ಭಾರತೀಯ ವಿಮಾನ ಪಡೆಗೆ ಶುಲ್ಕವಾಗಿ 290.74 ಕೋಟಿ ರೂಪಾಯಿ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ತಿಳಿಸಿದೆ.
ಈ ಕುರಿತು ನಿನ್ನೆ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ರಾಜ್ಯ ವಿಪತ್ತು ನಿರ್ವಹಣಾ ಪಡೆ ಒಟ್ಟು 987.73 ಕೋಟಿ ರೂಪಾಯಿ ಪ್ರವಾಹ ಸಂದರ್ಭದಲ್ಲಿ ಮೀಸಲಾಗಿಟ್ಟಿದ್ದು, ಅವುಗಳಲ್ಲಿ 586.04 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ ಎಂದರು.
ಕೇಂದ್ರ ಸರ್ಕಾರ ಭರಿಸಿರುವ 290.74 ಕೋಟಿ ರೂಪಾಯಿ ಸೇರಿದಂತೆ ಉಳಿದಿರುವ ಬಾಕಿಯನ್ನು ಒದಗಿಸಲು ರಾಜ್ಯ ಸರ್ಕಾರಕ್ಕೆ ಇನ್ನೂ 706.74 ಕೋಟಿ ರೂಪಾಯಿಗಳ ತುರ್ತು ಅಗತ್ಯವಿದೆ. ರಾಜ್ಯ ಸರ್ಕಾರ ರಾಜ್ಯ ವಿಪತ್ತು ಪಡೆಯಿಂದ ಈಗಿನ ಪರಿಹಾರ ಕಾರ್ಯಗಳಿಗೆ ಹಣ ಬಳಸಿಕೊಂಡರೆ ಉಳಿದ ಬಾಕಿಯನ್ನು ಪಾವತಿಸಲು ಸಾಲ ಪಡೆಯಬೇಕಾಗಿದೆ ಎಂದು ಸಿಎಂ ಹೇಳಿದರು.
ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ದಾನದ ರೂಪದಲ್ಲಿ 2,683.16 ಕೋಟಿ ರೂಪಾಯಿ ಬಂದಿದ್ದು ಅವುಗಳಲ್ಲಿ 688.48 ಕೋಟಿ ರೂಪಾಯಿ ವಿನಿಯೋಗವಾಗಿದೆ ಎಂದರು.
Advertisement