ರಮೇಶ್ ಚೆನ್ನಿತಲಾ
ರಮೇಶ್ ಚೆನ್ನಿತಲಾ

ಕೇರಳ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿಸಿ: ವಿರೋಧ ಪಕ್ಷ ನಾಯಕನಿಂದ ರಾಜ್ಯಪಾಲರಿಗೆ ಮನವಿ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಎಕ್ಸೈಸ್ ಸಚಿವ ಟಿ.ಪಿ ರಾಮಕೃಷ್ಣನ್ ವಿರುದ್ಧ 2018 ರ ಭ್ರಷ್ಟಾಚಾರ (ತಿದ್ದುಪಡಿ) ಕಾಯ್ದೆಯ ಸೆಕ್ಷನ್ 17 ಎ (1) ಸಿ ಅಡಿಯಲ್ಲಿ ವಿಚಾರಣೆಗಾಗಿ ಅನುಮತಿ....
ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಎಕ್ಸೈಸ್ ಸಚಿವ ಟಿ.ಪಿ ರಾಮಕೃಷ್ಣನ್ ವಿರುದ್ಧ 2018 ರ ಭ್ರಷ್ಟಾಚಾರ (ತಿದ್ದುಪಡಿ) ಕಾಯ್ದೆಯ ಸೆಕ್ಷನ್ 17 ಎ (1) ಸಿ ಅಡಿಯಲ್ಲಿ ವಿಚಾರಣೆಗಾಗಿ ಅನುಮತಿ ನೀಡಬೇಕೆಂದು ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಲಾ ರಾಜ್ಯಪಾಲ  ಪಿ.ಸದಾಶಿವಂಗೆ ಮನವಿ ಸಲ್ಲಿಸಿದ್ದಾರೆ.
ಕಂಟೋನ್ಮೆಂಟ್ ಹೌಸ್ ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಪತ್ರಿಕಾಗೋಷ್ಥಿಯನ್ನುದ್ದೇಶಿಸಿ ಮಾತನಾಡಿದ ರಮೇಶ್ ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಕಾಯ್ದೆಗಳ ದುರುಪಯೋಗ ಹಾಗೂ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಿದ್ದಾರೆ.ಅಬಕಾರಿ ನೀತಿ ನಿಯಮಗಳ ವಿರುದ್ಧ ಖಾಸಗಿ ವ್ಯಕ್ತಿಗಳಿಗೆ ಮೂರು ಬ್ರೇವರಿ ಲೈಸೆನ್ಸ್ ಹಂಚಿಕೆ ಮಾಡಿದ್ದಾರೆ.ಈ ಮೂಲಕ ಅವರು ಕಾನೂನು ಬಾಹಿರ ಕ್ರಿಮಿನಲ್ ಪಿತೂರಿ ಕೆಲಸದಲ್ಲಿ ಭಾಗಿಯಾಗಿದ್ದಾರೆ ಎಂದರು.
ಈ ಹಂಚಿಕೆಯು ಸಂಪೂರ್ಣ ಗೌಪ್ಯವಾಗಿ ನಡೆದಿದ್ದು ಈ ಕುರಿತಂತೆ ಎಲ್ ಡಿಎಫ್ ಲಿಸನ್ ಕಮಿಟ್ ಅಥವಾ ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಿಲ್ಲ.
ರಾಜ್ಯದ ಹೊರಗಿನಿಂದ ಮದ್ಯ ಸರಬರಾಜಾಗುವುದನ್ನು ಸಂಪೂರ್ಣ ನಿಷೇಧಿಸಬೇಕು.ಅಲ್ಲದೆ ರಾಜ್ಯದಲ್ಲಿ ಕೊರತೆಯಾಗಿರುವ ಶೇ.8ರಷ್ಟು ಮದ್ಯವನ್ನು ಸರ್ಕಾರಿ ಸ್ವಾಮ್ಯದ ಡಿಸ್ಟಿಲರಿಗಳಿಂದ ತಯಾರಿಸಿಕೊಡಬೇಕು ಎಂದು ವಿರೋಧ ಪಕ್ಷದ ಮುಖಂಡರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com