ಆಧಾರ್ ಇಕೆವೈಸಿ ಹೇಗೆ ನಿಲ್ಲಿಸುವಿರಿ? 15 ದಿನಗಳಲ್ಲಿ ತಿಳಿಸಿ, ಟೆಲಿಕಾಂ ಸಂಸ್ಥೆಗಳಿಗೆ ಯುಐಡಿಎಐ

ಸುಪ್ರೀಂ ಕೋರ್ಟ್ ಆಧಾರ್ ಕುರಿತು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಯುಐಡಿಎಐ ದೇಶದ ಟೆಲಿಕಾಂ ಸಂಸ್ಥೆಗಳು ಪಡೆಯುವ ಆಧಾರ್ ದಾಖಲಾತಿ ವಿವರವನ್ನು ಯಾವ ಬಗೆಯಲ್ಲಿ ನಿಲ್ಲಿಸುತ್ತೀರಿ?
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಸುಪ್ರೀಂ ಕೋರ್ಟ್ ಆಧಾರ್ ಕುರಿತು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಯುಐಡಿಎಐ ದೇಶದ ಟೆಲಿಕಾಂ ಸಂಸ್ಥೆಗಳು ಪಡೆಯುವ ಆಧಾರ್ ದಾಖಲಾತಿ ವಿವರವನ್ನು ಯಾವ ಬಗೆಯಲ್ಲಿ ನಿಲ್ಲಿಸುತ್ತೀರಿ ಎನ್ನುವುದನ್ನು ಮುಂಬರುವ ಹದಿನೈದು ದಿನಗಳಲ್ಲಿ ತಿಳಿಸಬೇಕೆಂದು  ಕೇಳಿದೆ.
ಭಾರ್ತಿ ಏರ್ ಟೆಲ್, ರಿಲಯನ್ಸ್ ಜಿಯೋ, ಐಡಿಯಾ,  ವೊಡಾಫೋನ್ ಸೇರಿದಂತೆ ದೇಶದ ಟೆಲಿಕಾಂ ಸೇವಾ ಪೂರೈಕೆದಾರರಿಗೆ (ಟಿಎಸ್ಪಿ) ಯುಐಡಿಎಐ  ಸುತ್ತೋಲೆ ಹೊರಡಿಸಿದೆ.
"26 ಸೆಪ್ಟಂಬರ್ 2018.ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನುಸಾರವಾಗಿ ಎಲ್ಲಾ ಟಿಎಸ್ಪಿಗಳನ್ನು ತಕ್ಷಣ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.ಎಲ್ಲಾ ಟಿಎಸ್ಪಿಗಳು ಆಧಾರ್ ಆಧಾರಿತ ದೃಢೀಕರಣ ವ್ಯವಸ್ಥೆಗಳ ಬಳಕೆಯನ್ನು ನಿಲ್ಲಿಸಲು ಯಾವ ಬಗೆಯ ಯೋಜನೆ ರೂಪಿಸಿಕೊಳ್ಳುತ್ತದೆ ಎನ್ನುವುದನ್ನು 15 ನೇ ಅಕ್ಟೋಬರ್, 2018 ರೊಳಗೆ ತಿಳಿಸಬೇಕು ಎಂದು ಇದರಲ್ಲಿ ತಿಳಿಸಲಾಗಿದೆ." ಪಿಟಿಐ ವರದಿ ಮಾಡಿದೆ.
ಕಳೆದ ವಾರ ಸುಪ್ರೀಂ ಕೋರ್ಟ್ ಆಧಾರ್ ಕಾಯ್ದೆಯ ಸೆಕ್ಷನ್ 57 ಅನ್ನು ರದ್ದುಗೊಳಿಸಿದೆ.ಖಾಸಗಿ ಕಂಪೆನಿಗಳು 12-ಅಂಕಿಯ ಬಯೋಮೆಟ್ರಿಕ್ ಐಡಿ ಆಧಾರಿತ ಇಕೆವೈಸಿ ಅನ್ನು ಬಳಸಲು ಅವಕಾಶವಿಲ್ಲ ಎಂದು ಅದು ಸ್ಪಷ್ಟವಾಗಿ ತಿಳಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com