ಡಾಇಲಿ ದೇಷರ್ ಕಥಾ ಮಾಧ್ಯಮ ಹಾಗೂ ನೋಂದಣಿ ಕಾಯ್ದೆಯನ್ನು ಉಲ್ಲಂಘನೆ ಮಾಡಿದೆ ಎಂದು ಪಶ್ಚಿಮ ತ್ರಿಪುರಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಶ್ಯಾಮಲ್ ದೇವ್ನಾಥ್ ಎಂಬುವವರು ದೂರು ದಾಖಲಿಸಿದ್ದರು. ಈ ಸಂಬಂಧ ಹಲವು ಬಾರಿ ನೊಟೀಸ್ ಕಳಿಸಿ, ವಿಚಾರಣೆಯನ್ನೂ ನಡೆಸಲಾಗಿತ್ತು. ಡೈಲಿ ದೇಷರ್ ಕಥಾ’ಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ತರುವಂತೆ ಸೂಚಿಸಲಾಗಿತ್ತಾದರೂ ಅದನ್ನು ಪೂರೈಸುವುದಕ್ಕೆ ಮುಖವಾಣಿ ಸಂಸ್ಥೆ ವಿಫಲವಾದ ಹಿನ್ನೆಲೆಯಲ್ಲಿ ಮಾನ್ಯತೆ ರದ್ದುಗೊಳಿಸಲಾಗಿದ್ದು ನಿಷೇಧ ಹೇರಲಾಗಿದೆ.