ಅಕ್ಟೋಬರ್ 4 ರಂದು ಭಾರತಕ್ಕೆ ರಷ್ಯಾ ಅಧ್ಯಕ್ಷರ ಭೇಟಿ: ಎಸ್-400 ಕ್ಷಿಪಣಿ ಒಪ್ಪಂದಕ್ಕೆ ಭಾರತ-ರಷ್ಯಾ ಸಹಿ

ಬಹು ನಿರೀಕ್ಷಿತ- ಬಹು ಚರ್ಚಿತ ಎಸ್-400 ಕ್ಷಿಪಣಿ ಒಪ್ಪಂದಕ್ಕೆ ಈ ವಾರದಲ್ಲೇ ಭಾರತ- ರಷ್ಯಾ ಸಹಿ ಹಾಕಲಿದೆ ಎಂದು ರಷ್ಯಾ ಅಧ್ಯಕ್ಷರ ಕಚೇರಿ ಹೇಳಿದೆ.
ಮೋದಿ-ವ್ಲಾದಿಮಿರ್ ಪುಟಿನ್
ಮೋದಿ-ವ್ಲಾದಿಮಿರ್ ಪುಟಿನ್
ಮಾಸ್ಕೊ: ಬಹು ನಿರೀಕ್ಷಿತ- ಬಹು ಚರ್ಚಿತ ಎಸ್-400 ಕ್ಷಿಪಣಿ ಒಪ್ಪಂದಕ್ಕೆ ಈ ವಾರದಲ್ಲೇ ಭಾರತ- ರಷ್ಯಾ ಸಹಿ ಹಾಕಲಿದೆ ಎಂದು ರಷ್ಯಾ ಅಧ್ಯಕ್ಷರ ಕಚೇರಿ ಹೇಳಿದೆ. 
ಅ.04 ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಆಗಮಿಸಲಿದ್ದು, ಈ ವೇಳೆ ಭಾರತ-ರಷಿಯಾ ಎಸ್-400 ಕ್ಷಿಪಣಿ ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದು ರಷ್ಯಾ ಅಧ್ಯಕ್ಷರ ವಿದೇಶಾಂಗ ನೀತಿಗಳ ಸಹಾಯಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 
ಸುಮಾರು 5 ಬಿಲಿಯನ್ ಡಾಲರ್ ಮೊತ್ತದ ಎಸ್-400 ಕ್ಷಿಪಣಿ ಒಪ್ಪಂದ ರಷ್ಯಾ  ಅಧ್ಯಕ್ಷರ ಭೇಟಿಯಲ್ಲಿ ಮಹತ್ವ ಪಡೆದಿದೆ. ರಷ್ಯಾದಿಂದ ಕ್ಷಿಪಣಿ ವ್ಯವಸ್ಥೆಗಳನ್ನು ಆಮದುಮಾಡಿಕೊಳ್ಳುವ ರಾಷ್ಟ್ರಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸುವ ಎಚ್ಚರಿಕೆ ನೀಡಿದೆ. ಆದರೂ ಭಾರತ ರಷ್ಯಾ ಜೊತೆ ಒಪ್ಪಂದಕ್ಕೆ ಮುಂದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com