ಸಂಗ್ರಹ ಚಿತ್ರ
ದೇಶ
ಕುಜದೋಷ ಪರಿಹಾರಕ್ಕಾಗಿ ಅಕ್ಕನ ಮಗಳ ಮೇಲೆ 4 ವರ್ಷ ನಿರಂತರ ಅತ್ಯಾಚಾರ!
ಜಾತಕದಲ್ಲಿ ಮಂಗಳ (ಕುಜ) ದೋಷವಿರುವ ಕಾರಣ ಅದನ್ನು ಸರಿಪಡಿಸುತ್ತೇನೆ ಎಂದು ನಂಬಿಸಿದ ವ್ಯಕ್ತಿಯೊಬ್ಬ ತನ್ನ ಅಕ್ಕನ ಮಗಳನ್ನು ಸತತ ನಾಲ್ಕು ವರ್ಷಗಳಿಂದ ಅತ್ಯಾಚಾರ ಮಾಡುತ್ತಾ ಬಂದಿದ್ದು ....
ನವದೆಹಲಿ: ಜಾತಕದಲ್ಲಿ ಮಂಗಳ (ಕುಜ) ದೋಷವಿರುವ ಕಾರಣ ಅದನ್ನು ಸರಿಪಡಿಸುತ್ತೇನೆ ಎಂದು ನಂಬಿಸಿದ ವ್ಯಕ್ತಿಯೊಬ್ಬ ತನ್ನ ಅಕ್ಕನ ಮಗಳನ್ನು ಸತತ ನಾಲ್ಕು ವರ್ಷಗಳಿಂದ ಅತ್ಯಾಚಾರ ಮಾಡುತ್ತಾ ಬಂದಿದ್ದು ಇದೀಗ ಪೋಲೀಸರ ಅತಿಥಿಯಾಗಿದ್ದಾನೆ.
ಯುವತಿಯ ಜಾತಕದಲ್ಲಿ ಕುಜ ದೋಷವಿದೆ ಎಂದು ನಂಬಿಸಿ ದೋಷ ಪರಿಹಾರದ ನೆಪದಲ್ಲಿ 23 ವರ್ಷದ ಯುವತಿಯನ್ನು ನಿರಂತರ ಅತ್ಯಾಚಾರವೆಸಗಿದ್ದ ಕಾಮುಕ ಸೋದರ ಮಾವನನ್ನು ದೆಹಲಿಯ ನರೇಲಾ ಪೋಲೀಸರು ಬಂಧಿಸಿದ್ದಾರೆ.
ಯುವತಿಗೆ ಮದುವೆಯಾದ ಬಳಿಕ ಸಹ ಆತ ಅವಳಿಗೆ ಕಿರುಕುಳ ನೀಡುತ್ತಿದ್ದ, ಅವಳನ್ನು ತನ್ನ ಬಳಿ ಕರೆದು ಅತ್ಯಾಚಾರ ನಡೆಸಲು ಯತ್ನಿಸುತ್ತಿದ್ದನೆಂದು ಯುವತಿಯ ಗಂಡನ ಮನೆಯವರು ದೂರಿನಲ್ಲಿ ವಿವರಿಸಿದ್ದಾರೆ.
ಮದುವೆಯಾದ ಬಳಿಕವೂ ತನಗೆ ತನ್ನ ಸಂಬಂಧಿಯಿಂದ ಕಿರುಕುಳ ಒದಗಿರುವುದನ್ನು ಆಕೆ ತನ್ನ ಮಾವನಲ್ಲಿ ಹೇಳಿಕೊಂಡಿದ್ದಾಳೆ. ತಕ್ಷಣ ಆಕೆಯ ಪತಿ ಹಾಗೂ ಮಾವ ಅವಳ ಸೋದರ ಮಾವನ ವಿರುದ್ದ ದೂರು ದಾಖಲಿಸಿದ್ದಾರೆ.ಸೆಪ್ಟೆಂಬರ್ 13ರಂದು ದೂರು ದಾಖಲಾಗಿದ್ದು ಅದೇ ದಿನ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.
ಮಹಿಳೆಗೆ ದೆಹಲಿಯ ಮಹಿಳಾ ಆಯೋಗದ ಕಡೆಯಿಂದ ಆಪ್ತ ಸಲಹೆ ಪಡೆದುಕೊಳ್ಳ್ಲುವಂತೆ ಪೋಲೀಸರು ಸೂಚಿಸಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ