ರಾಬಿ ಬೆಳೆಗಳ ಬೆಂಬಲ ಬೆಲೆ ಏರಿಕೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ

ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್ ಗಢದಲ್ಲಿ ವಿಧಾನಸಭಾ ಚುನಾವಣೆ ಎದುರಿಗಿದ್ದು ಕೇಂದ್ರ ಸರ್ಕಾರ ರಾಬಿ ಬೆಳೆಗಳು (ಹಿಂಗಾರು) ಬೆಳೆಗಳಿಗೆ ನೀಡುವ ಬೆಂಬಲ ಬೆಲೆಯನ್ನು ಏರಿಕೆ ಮಾಡಿದೆ.
ರಾಬಿ ಬೆಳೆ
ರಾಬಿ ಬೆಳೆ
ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್ ಗಢದಲ್ಲಿ ವಿಧಾನಸಭಾ ಚುನಾವಣೆ ಎದುರಿಗಿದ್ದು ಕೇಂದ್ರ ಸರ್ಕಾರ ರಾಬಿ ಬೆಳೆಗಳು (ಹಿಂಗಾರು) ಬೆಳೆಗಳಿಗೆ ನೀಡುವ ಬೆಂಬಲ ಬೆಲೆಯನ್ನು ಏರಿಕೆ ಮಾಡಿದೆ. 
ಗೋಧಿಗೆ ಪ್ರತಿ ಕ್ವಿಂಟಾಲ್ ಗೆ ನೀಡಲಾಗುತ್ತಿದ್ದ ಬೆಂಬಲ ಬೆಲೆಯನ್ನು 1,840 ರೂಪಾಯಿಗೆ ನಿಗದಿಪಡಿಸಲಾಗಿದೆ. ಕಳೆದ ವರ್ಷದ ಕನಿಷ್ಟ ಬೆಂಬಲ ಬೆಲೆಗೆ ಹೋಲಿಕೆ ಮಾಡಿದರೆ ಈ ಬಾರಿ ಪ್ರತಿ ಕ್ವಿಂಟಾಲ್ ಗೋಧಿಗೆ 105 ರೂಪಾಯಿ ಏರಿಕೆ ಮಾಡಲಾಗಿದ್ದರೆ, ಸ್ಯಾಫ್ಲವರ್ ಗೆ 845 ರೂಪಾಯಿ,  ರಾಪ್ಸೀಡ್ ಮತ್ತು ಸಾಸಿವೆಗಳಿಗೆ ರೂಪಾಯಿ 200, ಬಾರ್ಲಿಗೆ 30 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. 
ಕೇಂದ್ರ ಸಚಿವ ಸಂಪುಟದ್ ಸಭೆಯ ನಿರ್ಧಾರದ ಬಗ್ಗೆ ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್,  ಗೋಧಿ ಬೆಳೆಗೆ ಏರಿಕೆ ಮಾಡಲಾಗಿರುವ ಬೆಂಬಲ ಬೆಲೆ ರೈತರಿಗೆ ಶೇ.112.5 ರಷ್ಟು ಲಾಭ ತರಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com