ಪೆಹ್ಲು ಖಾನ್ ಪ್ರಕರಣ; ಸಾಕ್ಷಿಗಳ ಮೇಲೆ ಗುಂಡಿನ ದಾಳಿ ನಡೆದಿಲ್ಲ: ಪೊಲೀಸರು

ರಾಜಸ್ಥಾನದಲ್ಲಿ ಗೋರಕ್ಷಕರಿಂದ ಹತ್ಯೆಯಾದ ಹರ್ಯಾಣ ಮೂಲದ ಪೆಹ್ಲು ಖಾನ್‌ ಅವರ ಪುತ್ರ ಇರ್ಷಾದ್...
ಹತ್ಯೆಯಾದ ಪೆಹ್ಲು ಖಾನ್
ಹತ್ಯೆಯಾದ ಪೆಹ್ಲು ಖಾನ್
ಜೈಪುರ: ರಾಜಸ್ಥಾನದಲ್ಲಿ ಗೋರಕ್ಷಕರಿಂದ ಹತ್ಯೆಯಾದ ಹರ್ಯಾಣ ಮೂಲದ ಪೆಹ್ಲು ಖಾನ್‌ ಅವರ ಪುತ್ರ ಇರ್ಷಾದ್ ಹಾಗೂ ಇತರೆ ಪ್ರಮುಖ ಸಾಕ್ಷಿಗಳ ಮೇಲೆ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.
ಸಾಕ್ಷಿಗಳ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಬಗ್ಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಇದೊಂದು ನಕಲಿ ದೂರು ಎಂದು ಬೆಹ್ರೊರ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಕುಶಾಲ್ ಸಿಂಗ್ ಅವರು ತಿಳಿಸಿದ್ದಾರೆ.
ಕಳೆದ ಶನಿವಾರ ಪೆಹ್ಲು ಖಾನ್ ಹತ್ಯೆ ಪ್ರಕರಣದ ವಿಚಾರಣೆಗಾಗಿ ರಾಜಸ್ಥಾನದ ಬೆಹ್ರೋಡ್ ಕೋರ್ಟ್ ಗೆ ತೆರಳುತ್ತಿದ್ದ ವೇಳೆ ಪೆಹ್ಲು ಖಾನ್ ಪುತ್ರ ಇರ್ಷಾದ್ ಖಾನ್ ಹಾಗೂ ಇತರ ಸಾಕ್ಷಿಗಳು ತೆರಳುತ್ತಿದ್ದ ಕಾರಿನ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ಇರ್ಷಾದ್ ಅವರು ಅಲ್ವಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನನ್ನ ಕಾರಿನಿ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ದೂರಿದ್ದರು.
ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ನಮಗೆ ಕಾರು ನಿಲ್ಲಿಸುವಂತೆ ಕೇಳಿಕೊಂಡರು. ಆದರೆ ನಾವು ಕಾರು ನಿಲ್ಲಿಸದಿದ್ದಾಗ ನಮ್ಮ ಕಾರಿನ ಮೇಲೆ ಗುಂಡು ಹಾರಿಸಿದರು ಎಂದು ಇರ್ಷಾದ್ ಆರೋಪಿಸಿದ್ದರು. ಆದರೆ ಪೊಲೀಸರು ಇದೊಂದು ನಕಲಿ ದೂರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com