ರಾಫೆಲ್ ವಿಷಯ ಬೋಫೋರ್ಸ್ ಗಿಂತಲೂ 20 ಪಟ್ಟು ದೊಡ್ಡದು: ಶಶಿ ತರೂರ್
ರಾಫೆಲ್ ವಿಷಯ ಬೋಫೋರ್ಸ್ ಗಿಂತಲೂ 20 ಪಟ್ಟು ದೊಡ್ಡದು: ಶಶಿ ತರೂರ್

ರಾಫೆಲ್ ವಿಷಯ ಬೋಫೋರ್ಸ್ ಗಿಂತಲೂ 20 ಪಟ್ಟು ದೊಡ್ಡದು: ಶಶಿ ತರೂರ್

ಕಾಂಗ್ರೆಸ್ ಸಂಸದ ಶಶಿ ತರೂರ್ ರಾಫೆಲ್ ಒಪ್ಪಂದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ರಾಫೆಲ್ ಒಪ್ಪಂದದ ವಿಷಯ ಬೋಫೋರ್ಸ್ ಹಗರಣಕ್ಕಿಂತ 20 ಪಟ್ಟು ದೊಡ್ಡದು ಎಂದು ಹೇಳಿದ್ದಾರೆ.
ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ರಾಫೆಲ್ ಒಪ್ಪಂದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ರಾಫೆಲ್ ಒಪ್ಪಂದದ ವಿಷಯ ಬೋಫೋರ್ಸ್ ಹಗರಣಕ್ಕಿಂತ 20 ಪಟ್ಟು ದೊಡ್ಡದು ಎಂದು ಹೇಳಿದ್ದಾರೆ. 
ರಾಫೆಲ್ ವಿಷಯ, ಕಾಂಗ್ರೆಸ್ ಅವಧಿಯಲ್ಲಿ ನಡೆದಿದ್ದ ಬೋಫೋರ್ಸ್ ಹಗರಣಕ್ಕಿಂತ 20 ಪಟ್ಟು ದೊದ್ಡದು ಆದರೆ ಮಾಧ್ಯಮಗಳು ಈ ಹಿಂದಿನ ಹಗರಣಕ್ಕೆ ನೀಡಿದ್ದ ಮಹತ್ವವನ್ನು ರಾಫೆಲ್ ವಿಷಯದಲ್ಲಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.  1980 ರಲ್ಲಿ ಮಾಧ್ಯಮಗಳು ಬೋಫೋರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಅಧ್ಯಯನ ನಡೆಸಿ ವರದಿ ಪ್ರಕಟಿಸಿದ್ದವು ಪರಿಣಾಮ 1989 ರಲ್ಲಿ ನಡೆದ ಚುನಾವಣೆಯಲ್ಲಿ ರಾಜೀವ್ ಗಾಂಧಿ ಸೋಲನ್ನು ಎದುರಿಸಿದರು ಎಂದು ಶಶಿ ತರೂರ್ ಹೇಳಿದ್ದಾರೆ. 
1980 ರಲ್ಲಿ ಮಾಧ್ಯಮಗಳು ಬೋಫೋರ್ಸ್ ಹಗರಣವನ್ನು ಪ್ರಸ್ತಾಪ ಮಾಡದೇ ಇರುವ ದಿನವೇ ಇರಲಿಲ್ಲ. ಬೋಫೋರ್ಸ್ ವಿಚಾರದಲ್ಲಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ವಿಶ್ವಾದ್ಯಂತ ಮಾಧ್ಯಮಗಳು ತಮ್ಮ ಪ್ರತಿನಿಧಿಗಳನ್ನು ಕಳಿಸಿದ್ದರು, ಈಗ ಅದಕ್ಕೆ 20 ಪಟ್ಟು ದೊಡ್ದದಾದ ರಾಫೆಲ್ ಒಪ್ಪಂದ ಹಗರಣ ನಡೆದಿದೆ, ಬೋಫೋರ್ಸ್ ಗೆ ಇಂದಿನ ಮಾಧ್ಯಮಗಳು ಮಹತ್ವ ನೀಡುತ್ತಿರುವುದನ್ನು ನೋಡಿದ್ದೀರಾ? ಖಂಡಿತವಾಗಿಯೂ ನೀಡುತ್ತಿಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com