'ದೀಪದ ಮಹಿಳೆ' ಖ್ಯಾತಿಯ ಗೀತಾ ಉಪ್ಲೇಕರ್ ವಿಧಿವಶ

ಮಹಾನ್ ಕಲಾಕೃತಿ "ದೀಪ ಹಿಡಿದ ಮಹಿಳೆ"ಗೆ ರೂಪದರ್ಶಿಯಾಗಿದ್ದ ಗೀತಾ ಉಪ್ಲೇಕರ್ ನಿಧನಾರಾಗಿದ್ದಾರೆ. ಅವರಿಗೆ 102 ವರ್ಷ ವಯಸ್ಸಾಗಿತ್ತು.
ಗೀತಾ ಉಪ್ಲೇಕರ್
ಗೀತಾ ಉಪ್ಲೇಕರ್
Updated on: 
ಮುಂಬೈ: ಮಹಾನ್ ಕಲಾಕೃತಿ "ದೀಪ ಹಿಡಿದ ಮಹಿಳೆ"ಗೆ ರೂಪದರ್ಶಿಯಾಗಿದ್ದ ಗೀತಾ ಉಪ್ಲೇಕರ್ ನಿಧನಾರಾಗಿದ್ದಾರೆ. ಅವರಿಗೆ 102 ವರ್ಷ ವಯಸ್ಸಾಗಿತ್ತು.
ಮಹಾರಾಷ್ಟ್ರದ ಕೋಲ್ಹಾಪುರದಲ್ಲಿ ಮಂಗಳವಾರ ಸಂಜೆ ತೀವ್ರ ಅನಾರೋಗ್ಯದ ಬಳಿಕ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಮೂಲಗಳು ಹೇಳಿದೆ.
ಮೈಸೂರಿನ ಜಗನ್ಮೋಹನ ಅರಮನೆಯ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿತವಾಗಿರುವ ಎಸ್.ಎಸ್. ಹಲ್ಸಂಕರ್ ಅವರ ಜಲವರ್ಣದ ಮೇರುಕೃತಿ "ದೀಪದ ಮಹಿಳೆ"ಗೆ ಗೀತಾ ರೂಪದರ್ಶಿಯಾಗಿದ್ದರು. ಈ ಕಲಾಕೃತಿ ಒಂದು ಅಮೂಲ್ಯ ಆಸ್ತಿಯಾಗಿದ್ದು ಗ್ಯಾಲರಿಗೆ ಆಗಮಿಸುವ ಪ್ರವಾಸಿಗರು, ಕಲಾಪ್ರೇಮಿಗಳ ಪ್ರಮುಖ ಆಕರ್ಷಣೆಯಾಗಿದೆ. ಸುಮಾರು ಏಳು ದಶಕಗಳ ಹಿಂದೆ, 1945-46ರಲ್ಲಿ ಈ ಕಲಾಕೃತಿ ರಚಿಸಲ್ಪಟ್ಟಿತ್ತು.
ಇದು ಹಲ್ಸಂಕರ್ ಅವರ ಅದ್ಭುತ ಕೃತಿಯಾಗಿದ್ದರೂ ಸಹ ರಾಜಾ ರವಿವರ್ಮ ಅವರ ಕಲಾಕೃತಿ ಎಂದೇ ತಪ್ಪಾಗಿ ಭಾವಿಸಲಾಗಿತ್ತು. ಚಿತ್ರದಲ್ಲಿರುವ ಗೀತಾ ಹಲ್ಸಂಕರ್ ಅವರ ಮೂರನೇ ಪುತ್ರಿಯಾಗಿದ್ದಾರೆ. ಈಕೆಗೆ ಆಭರಣ ತಯಾರಕ  ಕೃಷ್ಣಕಾಂತ್ ಉಪ್ಕರ್ ಅವರೊಡನೆ ವಿವಾಹವಾದಂದಿನಿಂದ ಕೊಲ್ಹಾಪುರದಲ್ಲಿ ವಾಸವಾಗಿದ್ದರು.
ಮಂಗಳವಾರ 11 ಗಂಟೆಗೆ ಮೃತರ ಅಂತಿಮ ವಿಧಿಗಳನ್ನು ನೆರವೇರಿಸಲಾಗಿದೆ.ಎಂದು ಗೀತಾ ಅವರ ಸೋದರಳಿಯ ರಾಜಾ ಉಪ್ಲೇಕರ್ಪಿಟಿಐಗೆ ಹೇಳಿದ್ದಾರೆ.
"ನಾನು 12 ವರ್ಷದವನಿದ್ದಾಗ ಅದೊಮ್ಮೆ ದೀಪಾವಳಿಯ ಸಮಯದಲ್ಲಿ ಬಾಪು (ಹಲ್ಸಂಕರ್) ದೀಪ ಹಿಡಿದಿದ್ದ ನನ್ನನ್ನು ನೋಡಿದ್ದರು.ಮತ್ತು ಅವರು ತಮ್ಮ ಚಿತ್ರರಚನೆಗೆ ನಾನು ಸಹಕರಿಸುವಂತೆ ಕೇಳಿದ್ದರು" ಗೀತಾ ಕೊಲ್ಹಾಪುರದಲ್ಲಿ ನಡೆದ ತಮ್ಮ 100 ನೇ ವರ್ಷದ ಜನ್ಮದಿನದ  ಸಮಾರಂಭದಲ್ಲಿ ಹೇಳಿದ್ದರು. ತಂದೆಯವರು ಈ ಚಿತ್ರ ರಚನೆಗೆ ತೊಡಗಿದ್ದಾಗ ತಾನು ಸತತ ಮೂರು ಗಂಟೆಗಳ ಕಾಲ ನಿರಂತರವಾಗಿ ದೀಫ ಹಿಡಿದು ನಿಂತ ಭಂಗಿಯಲ್ಲೇ ನಿಲ್ಲಬೇಕಾಗಿತ್ತು ಎಂದು ಅವರು ಹೇಳಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com