ತೈಲ ಬೆಲೆ ಇಳಿಕೆ ಜನತೆಯ ಕ್ಷೇಮದೆಡೆಗೆ ಮೋದಿ ಸರ್ಕಾರದ ಸಂವೇದನೆಯನ್ನು ತೋರುತ್ತದೆ: ಶಾ
ಮಧ್ಯಪ್ರದೇಶ, ಚತ್ತೀಸ್ ಗಢ, ರಾಜಸ್ಥಾನ, ಮಿಜೋರಾಂ ಚುನಾವಣೆಗಳ ಹಿನ್ನೆಲೆಯಲ್ಲಿ ತೈಲ ಬೆಲೆ ಇಳಿಕೆ ಮಾಡಿದ್ದನ್ನು ಬಿಜೆಪಿ "ಜನತೆಯೆಡೆಗೆ ಮೋದಿ ಸರ್ಕಾರದ ಸಂವೇದನೆಯನ್ನು ತೋರುತ್ತದೆ" ಎಂದು ಹೇಳಿದೆ.
ನವದೆಹಲಿ: ಮಧ್ಯಪ್ರದೇಶ, ಚತ್ತೀಸ್ ಗಢ, ರಾಜಸ್ಥಾನ, ಮಿಜೋರಾಂ ಚುನಾವಣೆಗಳ ಹಿನ್ನೆಲೆಯಲ್ಲಿ ತೈಲ ಬೆಲೆ ಇಳಿಕೆ ಮಾಡಿದ್ದನ್ನು ಬಿಜೆಪಿ "ಜನತೆಯೆಡೆಗೆ ಮೋದಿ ಸರ್ಕಾರದ ಸಂವೇದನೆಯನ್ನು ತೋರುತ್ತದೆ" ಎಂದು ಹೇಳಿದೆ.
ತೈಲ ಬೆಲೆ ಇಳಿಕೆ ಬೆನ್ನಲ್ಲೇ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, "ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು 2.50 ರೂಪಾಯಿ ಇಳಿಕೆ ಮಾಡಿರುವುದು ಜನತೆಯ ಕ್ಷೇಮದೆಡೆಗೆ ನರೇಂದ್ರ ಮೋದಿ ಸರ್ಕಾರದ ಸಂವೇದನೆಯನ್ನು ತೋರುತ್ತದೆ" ಎಂದು ಬಣ್ಣಿಸಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿದ್ದು, ರಾಜ್ಯ ಸರ್ಕಾರಗಳಿಗೂ ಅಷ್ಟೇ ಪ್ರಮಾಣದಲ್ಲಿ ಇಳಿಕೆ ಮಾಡಲು ಸೂಚಿಸಿರುವುದರಿಂದ ಶೀಘ್ರವೇ ಜನತೆಗೆ ಪ್ರತಿ ಲೀಟರ್ ಪೆಟ್ರೋಲ್ ಗೆ 5 ರೂಪಾಯಿ ಹೊರೆ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದರು.