ನವದೆಹಲಿ: ಭಾರತದಲ್ಲಿ ಅಕ್ರಮವಾಗಿ ನೆಲೆಯೂರಿದ್ದ ಏಳು ರೊಹಿಂಗ್ಯಾಗಳನ್ನು ಮತ್ತೆ ಮ್ಯಾನ್ಮಾರ್ ಗೆ ಗಡಿಪಾರು ಮಾಡಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ. ರೊಹಿಂಗ್ಯಾ ಮುಸ್ಲಿಮರ ಅಕ್ರಮ ವಲಸೆ ಕುರಿತು ರಾಜಕೀಯ ವಲಯದಲ್ಲಿ ತಿಕ್ಕಾಟಗಳು ನಡೆಯುತ್ತಿರುವ ಈ ಹೊತ್ತಿನಲ್ಲೇ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.