ದೀಪಾವಳಿ ವೇಳೆಗೆ ಅಹಮದಾಬಾದ್‌ನಲ್ಲಿ ಅಮೂಲ್‌ನಿಂದ ತಾಜಾ ಒಂಟೆ ಹಾಲು ಮಾರುಕಟ್ಟೆಗೆ!

ಪ್ರಧಾನಿ ನರೇಂದ್ರ ಮೋದಿ ಅವರು ಒಂಟೆ ಹಾಲಿನ ಪ್ರಯೋಜನಗಳ ಬಗ್ಗೆ ಮಾತನಾಡಿದ ಬೆನ್ನಲ್ಲೇ ಇದೀಗ ಅಮೂಲ್ ಸಂಸ್ಕರಿಸಿದ ಒಂಟೆ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ...
ಅಮೂಲ್
ಅಮೂಲ್
ಅಹಮದಾಬಾದ್(ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅವರು ಒಂಟೆ ಹಾಲಿನ ಪ್ರಯೋಜನಗಳ ಬಗ್ಗೆ ಮಾತನಾಡಿದ ಬೆನ್ನಲ್ಲೇ ಇದೀಗ ಅಮೂಲ್ ಸಂಸ್ಕರಿಸಿದ ಒಂಟೆ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಅಮೂಲ್ ಎಂದೇ ಹೆಸರು ವಾಸಿಯಾಗಿರುವ ಗುಜರಾತ್ ಮಿಲ್ಕ್ ಮಾರ್ಕೆಂಟಿಗ್ ಫೆಡರೇಷನ್(ಜಿಸಿಎಂಎಂಎಫ್) ದೀಪಾವಳಿ ವೇಳೆಗೆ ಸಂಸ್ಕರಿಸಿದ ತಾಜಾ ಒಂಟೆ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. 
500 ಎಂಎಲ್ ಬಾಟಲ್ ಸಂಸ್ಕರಿಸಿದ್ದ ಒಂಟೆ ಹಾಲನ್ನು ಅಮೂಲ್ ಮುಂದಿನ ದೀಪಾವಳಿ ವೇಳೆಗೆ ಮಾರುಕಟ್ಟೆಗೆ ತಂದು ಪ್ರಯೋಗಿಕ ಪರೀಕ್ಷೆ ಮಾಡಲಾಗುತ್ತದೆ. 
ಒಂಟೆ ಹಾಲಿನ ಉತ್ಪನ್ನ ಮಾರುಕಟ್ಟೆಗೆ ಬರುತ್ತಿರುವುದು ಇದು ದೇಶದಲ್ಲೇ ಮೊದಲು. 2012-13ರ ಸಾಲಿನ ಬಜೆಟ್ ನಲ್ಲಿ ಒಂಟೆಯ ಹಾಲನ್ನು ಸಂಸ್ಕರಿಸಿ ವಿವಿಧ ಹಾಲಿನ ಉತ್ಪನ್ನಗಳನ್ನು ತಯಾರಿಸುವ ಡೈರಿ ಘಕಟ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿತ್ತು. 
ಒಂಟೆಯ ಹಾಲನ್ನು ಸಂಗ್ರಹಿಸಲು ಸ್ಥಳೀಯ ಒಂಟೆ ಸಾಕಣೆದಾರರ ಕಚ್ಛ್ ಊಂಟ್ ಉಚ್ಚೆರಕ್ ಮಾಲ್ದಾರಿ ಸಂಘಟನೆಯು ರಚನೆಗೊಂಡಿದೆ. ಕಚ್ಛ್ ನಲ್ಲಿ ಡೈರಿ ಘಟಕವು ಸ್ಥಾಪನೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com