ಜಬಲ್ ಪುರ್(ಮಧ್ಯಪ್ರದೇಶ): ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣೆ ಕಾವು ಜೋರಾಗುತ್ತಿದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ರ್ಯಾಲಿ ವೇಳೆ ಬಲೂನುಗಳು ಸ್ಫೋಟಗೊಂಡಿದ್ದು ಆತಂಕಕ್ಕೆ ಕಾರಣವಾಗಿತ್ತು.
ರಾಹುಲ್ ಗಾಂಧಿ ತೆರೆದ ವಾಹನದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಕೈ ಕಾರ್ಯಕರ್ತರು ಬಲೂನ್ ಗಳ ಗೊಂಚಲನ್ನು ಹಿಡಿದಿದ್ದರು. ಈ ವೇಳೆ ಆರತಿ ಬೆಳಗಲೆಂದು ಅಭಿಮಾನಿಯೊಬ್ಬರು ಬಂದಿದ್ದು ಬೆಂಕಿ ಬಲೂನ್ ಗೊಂಚಲಿಗೆ ತಗುಲಿ ಏಕಾಏಕಿ ಸ್ಫೋಟಗೊಂಡಿದೆ.
ದಿಢೀರ್ ಅಂತಾ ಬಲೂನ್ ಗಳು ಸ್ಫೋಟಗೊಂಡಿದ್ದರಿಂದ ರಾಹುಲ್ ಗಾಂಧಿ ಬೆಚ್ಚಿ ಬಿದ್ದರು. ಬಳಿಕ ಬಲೂನ್ ಸ್ಫೋಟ ಎಂದು ತಿಳಿದ ಬಳಿಕ ನಿರಾಳರಾದರು. ರಾಹುಲ್ ಗಾಂಧಿ ರೋಡ್ ಶೋಗೆ ವ್ಯಾಪಕ ಕಟ್ಟೆತ್ತರ ವಹಿಸಲಾಗಿದೆ.