ಉತ್ತರ್ ಖಂಡ್ : ಕಾರ್ಯಕ್ಷಮತೆ ಮತ್ತು ಸಂಭಾವ್ಯ ನೀತಿ ಪ್ರಗತಿಯ ಮೂಲಗಳಾಗಿವೆ -ನರೇಂದ್ರ ಮೋದಿ

ಕಾರ್ಯಕ್ಷಮತೆ ಮತ್ತು ಸಂಭಾವ್ಯ ನೀತಿ ಪ್ರಗತಿಯ ಮೂಲಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಡೆಹ್ರಾಡೂನ್  : ಕಾರ್ಯಕ್ಷಮತೆ ಮತ್ತು ಸಂಭಾವ್ಯ  ನೀತಿ  ಪ್ರಗತಿಯ ಮೂಲಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉತ್ತರ್ ಖಂಡ್ ಹೂಡಿಕೆದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರಸರ್ಕಾರ  ದೇಶದಲ್ಲಿ ಸುಲಭ ವ್ಯವಹಾರದ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದಲ್ಲಿ ಮಹತ್ವದ ಬದಲಾವಣೆಯಾಗುತ್ತಿದ್ದು, ಪಾರದರ್ಶಕ ಹಾಗೂ ಕ್ಷಿಪ್ರಗತಿಯ ತೆರಿಗೆ ವ್ಯವಸ್ಥೆಯ ಅನುಷ್ಟಾನಕ್ಕೆ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.

ದಿವಾಳಿತನ ಕಾರಣ  ವ್ಯವಹಾರವನ್ನು ಸುಲಭವಾಗಿ ಮಾಡುವುದರಿಂದ ಬ್ಯಾಂಕಿಂಗ್ ವ್ಯವಸ್ಥೆ ಸದೃಢಗೊಳ್ಳಲಿದೆ. ದೇಶದಲ್ಲಿ ವಿತ್ತೀಯ ಕೊರತೆ ಕಡಿಮೆಯಾಗಿದೆ ಎಂದು ಮೋದಿ ಹೇಳಿದರು.

 ದೇಶದ ಆಧುನಿಕತೆಯತ್ತ ಹೊರಳುತ್ತಿದ್ದು, 400 ರೈಲ್ವೆ ನಿಲ್ದಾಣಗಳನ್ನು ಆಧುನೀಕರಣಗೊಳಿಸಲಾಗಿದೆ. 100 ವಿಮಾನ ನಿಲ್ದಾಣ ಹಾಗೂ ಹೆಲಿಪ್ಯಾಡ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.ಆಯುಷ್ಮನ್ ಭಾರತ್  ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಹೂಡಿಕೆಯ ಅವಕಾಶವಾಗಿದೆ ಎಂದರು.

ಆಹಾರ ಸಂಸ್ಕರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕೃಷಿ ಕ್ಷೇತ್ರದಲ್ಲ ಹೆಚ್ಚಿನ ಹೂಡಿಕೆಯಾಗಬೇಕಾಗಿದೆ. ನವಿಕರೀಸಬಹುದಾದ ಇಂಧನದಲ್ಲಿ ಭಾರತ ವಿಶ್ವದ ಮುಂಚೂಣಿ ರಾಷ್ಟ್ರವಾಗಿ ದಾಪುಗಾಲು ಇಡುತ್ತಿದೆ ಎಂದು ತಿಳಿಸಿದರು.
2030ರೊಳಗೆ ದೇಶದಲ್ಲಿಯೇ  ಶೇ. 40 ರಷ್ಟು ಪಳಿಯುಳಿಕೆ ಅಲ್ಲದ ಇಂಧನ ಹಾಗೂ 2022ರೊಳಗೆ 175  (GW) ಜೈವಿಕ ಇಂಧನ ಉತ್ಪಾದಿಸಲಾಗುವುದು, ಏಕ ಸೂರ್ಯ, ಏಕ ವಿಶ್ವ ನಮ್ಮ ಮಂತ್ರವಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com