'ಬ್ರಹ್ಮೋಸ್' ಕ್ಷಿಪಣಿ ಮಾಹಿತಿ ಸೋರಿಕೆ: ಶಂಕಿತ ಪಾಕ್ ಐಎಸ್​​ಐ ಏಜೆಂಟ್ ಬಂಧನ

ದೇಶದ ಪ್ರತಿಷ್ಠಿತ ಕ್ಶಿಪಣಿಗಳಲ್ಲಿ ಒಂದಾದ "ಬ್ರಹ್ಮೋಸ್ " ಕುರಿತ ತಾಂತ್ರಿಕ ಮಾಹಿತಿಗಳನ್ನು ನೆರೆಯ ವೈರಿ ಪಾಕಿಸ್ತಾನಕ್ಕೆ ಅಕ್ರಮವಾಗಿ ನೀಡುತ್ತಿದ್ದ ಶಂಕಿತ.....
ಬ್ರಹ್ಮೋಸ್
ಬ್ರಹ್ಮೋಸ್
ನಾಗ್ಪುರ್: ದೇಶದ ಪ್ರತಿಷ್ಠಿತ ಕ್ಶಿಪಣಿಗಳಲ್ಲಿ ಒಂದಾದ "ಬ್ರಹ್ಮೋಸ್ " ಕುರಿತ ತಾಂತ್ರಿಕ ಮಾಹಿತಿಗಳನ್ನು ನೆರೆಯ ವೈರಿ ಪಾಕಿಸ್ತಾನಕ್ಕೆ ಅಕ್ರಮವಾಗಿ ನೀಡುತ್ತಿದ್ದ ಶಂಕಿತ ಐಎಸ್​ಐ ಏಜೆಂಟ್ ಅನ್ನು ಮಹಾರಾಷ್ಟ್ರದ ನಾಗ್ಪುರದಲ್ಲಿ ಬಂಧಿಸಲಾಗಿದೆ.
ಬಂಧಿತನನ್ನು ನಿಶಾಂತ್ ಅಗರ್​ವಾಲ್ ಎಂದಯ ಗುರುತಿಸಿದ್ದು ನಾಗ್ಪುರದಲ್ಲಿನ  ಬ್ರಹ್ಮೋಸ್ ಏರೋಸ್ಪೇಸ್​​ ಘಟಕದಲ್ಲಿ ಈತ ಕಳೆದ ನಾಲ್ಕು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.
ವರದಿಗಳ ಪ್ರಕಾರ  ಅಗರ್​ವಾಲ್ ಪಾಕಿಸ್ತಾನದ ಗೂಢಚಾರ ಸಂಸ್ಥೆಯಾದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ನ ಶಂಕಿತ್ ಸದಸ್ಯನಾಗಿದ್ದಾನೆ.ಈಗ ಆರೋಪಿಯನ್ನು ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ಎಟಿಎಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಿಶ್ವದ ಅತಿ ವೇಗವಾದ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್ ಕುರಿತ ಸೂಕ್ಷ್ಮ ಮಾಹಿತಿಯನ್ನು ಆರೋಪಿಯು ಪಾಕಿಸ್ತಾನಕ್ಕೆ ಸೋರಿಕೆ ಮಾಡುತ್ತಿದ್ದನೆಂದು ಆಂಗ್ಲ ಮಾದ್ಯಮ ಸಂಸ್ಥೆಯೊಂದು ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com