#MeToo ಅಭಿಯಾನ: ಹೆಸರು ಬಹಿರಂಗಪಡಿಸಲಷ್ಟೇ ಸಂತ್ರಸ್ತರು ಮುಂದಾಗುತ್ತಿದ್ದಾರೆ: ಎನ್ ಸಿ ಡಬ್ಲ್ಯೂ
ದೇಶ
#MeToo ಅಭಿಯಾನ: ಹೆಸರು ಬಹಿರಂಗಪಡಿಸಲಷ್ಟೇ ಸಂತ್ರಸ್ತರು ಮುಂದು: ಎನ್ ಸಿ ಡಬ್ಲ್ಯೂ
#MeToo ಅಭಿಯಾನದಲ್ಲಿ ಈಗಾಗಲೇ ಹಲವು ಖ್ಯಾತ ನಾಮರ ಚರಿತ್ರೆ ಬಹಿರಂಗಗೊಂಡಿದೆ. ಮಹಿಳೆಯರು ತಮಗೆ ಲೈಂಗಿಕ ಕಿರುಕುಳ ನೀಡಿರುವ ವ್ಯಕ್ತಿಗಳ ಹೆಸರುಗಳನ್ನಷ್ಟೇ ಬಹಿರಂಗಪಡಿಸುತ್ತಿದ್ದಾರೆ, ಆದರೆ ಅವರ
ನವದೆಹಲಿ: #MeToo ಅಭಿಯಾನದಲ್ಲಿ ಈಗಾಗಲೇ ಹಲವು ಖ್ಯಾತ ನಾಮರ ಚರಿತ್ರೆ ಬಹಿರಂಗಗೊಂಡಿದೆ. ಮಹಿಳೆಯರು ತಮಗೆ ಲೈಂಗಿಕ ಕಿರುಕುಳ ನೀಡಿರುವ ವ್ಯಕ್ತಿಗಳ ಹೆಸರುಗಳನ್ನಷ್ಟೇ ಬಹಿರಂಗಪಡಿಸುತ್ತಿದ್ದಾರೆ, ಆದರೆ ಅವರ ವಿರುದ್ಧ ಕ್ರಮ ಜರುಗಿಸುವಂತೆ ದೂರು ನೀಡುತ್ತಿಲ್ಲ.
ಈ ಬಗ್ಗೆ ಸ್ವತಃ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥರು ಪ್ರತಿಕ್ರಿಯೆ ನೀಡಿದ್ದು, ಬಹುತೇಕ ಸಂತ್ರಸ್ತರು ತಮಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗಳ ಹೆಸರುಗಳನ್ನಷ್ಟೇ ಬಹಿರಂಗಪಡಿಸಲು ಮುಂದಾಗುತ್ತಿದ್ದಾರೆ. ಆದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡುತ್ತಿಲ್ಲ, ಹೆಸರು ಬಹಿರಂಗಪಡಿಸುವುದನ್ನು ಹೊರತುಪಡಿಸಿ ಒಂದು ಹೆಜ್ಜೆಯೂ ಮುಂದೆ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.
ಲೈಂಗಿಕ ಕಿರುಕುಳದ ಸಂತ್ರಸ್ತರಿಗೆ ಲಿಖಿತ ರೂಪದಲ್ಲಿ ದೂರು ನೀಡುವಂತೆ ಸೂಚನೆ ನೀಡಲಾಗಿದೆ. ಆದರೆ ಯಾರೂ ಅದಕ್ಕೆ ಮುಂದಾಗುತ್ತಿಲ್ಲ. ಇದು ಹಲವು ಪ್ರಕರಣಗಳಲ್ಲಿ ಕಂಡುಬಂದಿದೆ ಎಂದು ಎನ್ ಸಿ ಡಬ್ಲ್ಯೂ ಹೇಳಿಕೆ ಬಿಡುಗಡೆ ಮಾಡಿದೆ. ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ರಕ್ಷಣೆ ಹಾಗೂ ಗೌರವಗಳನ್ನು ಕಾಪಾಡಲು ಕ್ರಮ ಕೈಗೊಳ್ಳುವುದಾಗಿ ಮಹಿಳಾ ಆಯೋಗ ಇದೇ ವೇಳೆ ಭರವಸೆ ನೀಡಿದೆ.


