ಮಧ್ಯಪ್ರದೇಶ: ತೆರೆದ ಬಾವಿಯಲ್ಲಿ ಐವರು ಸಹೋದರರ ಮೃತ ದೇಹ ಪತ್ತೆ!

ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಸೆಂದ್ವಾ ಗ್ರಾಮೀಣ ಭಾಗದಲ್ಲಿ. 3 ರಿಂದ 7 ವರ್ಷ ವಯೋಮಾನದ ಐವರು ಸಹೋದರರ ಮೃತ ದೇಹಗಳು ತೆರೆದ ಬಾವಿಯಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಭೂಪಾಲ್: ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಸೆಂದ್ವಾ ಗ್ರಾಮೀಣ ಭಾಗದಲ್ಲಿ. 3 ರಿಂದ 7 ವರ್ಷ ವಯೋಮಾನದ ಐವರು ಸಹೋದರರ ಮೃತ ದೇಹಗಳು ತೆರೆದ ಬಾವಿಯಲ್ಲಿ ಪತ್ತೆಯಾಗಿದೆ. 
ನಾಲ್ವರು ಸಹೋದರರು ಒಬ್ಬ ತಾಯಿಯ ಮಕ್ಕಳಾಗಿದ್ದಾರೆ. ಮೂರು ವರ್ಷದ ಮತ್ತೊಬ್ಬ ಬಾಲಕ ಮೃತರಿಗೆ ಮಲಹೋದರನಾಗಿದ್ದಾನೆ,.
ಬೆಳಗ್ಗೆ ಆರು ಗಂಟೆ ವೇಳೆಗೆ ಗ್ರಾಮಸ್ಥರು ಬಾವಿಯಲ್ಲಿ ಮೃತದೇಹ ತೇಲಾಡುತ್ತಿರುವುದನ್ನು ನೋಡಿ ಎಲ್ಲರಿಗೂ ತಿಳಿಸಿದ್ದಾರೆ. ಕೂಡಲೇ  ಸ್ಥಳಕ್ಕೆ ಧಾವಿಸಿದ ಸೆಂದ್ವಾ ಗ್ರಾಮೀಣ ಪೊಲೀಸರು  ಅಪ್ರಾಪ್ತ ಬಾಲಕರ ಶವಗಳನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮೃತ ಬಾಲಕರು ಚಿಕ್ಕಿ ಗ್ರಾಮದವರಾಗಿದ್ದು, ಅವರ ಮನೆಯಿಂದ ಬಾವಿಗೆ ಸುಮಾರು 1.5 ಕಿಮೀ ದೂರವಿದೆ,.  ಭಾತರ್ ಸಿಂಗ್ ಎಂಬ ಕೂಲಿ ಕಾರ್ಮಿಕನ ಮಕ್ಕಳಾಗಿದ್ದಾರೆ, ಈತನಿಗೆ ಇಬ್ಬರು ಹೆಂಡತಿಯರಿದ್ದು, ಸುಂಗಿ ಬಾಯಿಗೆ ನಾಲ್ವರು ಹಾಗೂ ಎರಡನೇ ಹೆಂಡತಿ ಸುನೀತಾ ಗೆ ಒಬ್ಬ ಮಗನಿದ್ದ. 
ಬುಧವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ, ಇದೇ ವೇಳೆ  ಭಾತರ್ ಸಿಂಗ್ ನ ಮೊದಲ ಪತ್ನಿ ಸುಂಗಿ ಬಾಯ್ ನಿಗೂಡವಾಗಿ ನಾಪತ್ತೆಯಾಗಿದ್ದಾಳೆ. ಇನ್ನೂ ಎರಡನೇ ಪತ್ನಿ ಸುನೀತಾ ಮಕ್ಕಳ ಸಾವಿನ ಆಘಾತದಿಂದ ಇನ್ನೂ ಹೊರ ಬಂದಿಲ್ಲ.
ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದು, ಮಕ್ಕಳನ್ನು ಉಸಿರುಗಟ್ಟಿಸಿ ಸಾಯಿಸಿ ನಂತರ ಬಾವಿಯೊಳಗೆ ತಳ್ಳಿರಬಹುದು, ಬಾವಿಗೆ ತಳ್ಳುವ ಮೊದಲು ಅವರಿಗೆ ಥಳಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 
ಭಾತರ್ ಸಿಂಗ್ ಇಬ್ಬರು ಪತ್ನಿಯರ ನಡುವೆ ಜಗಳ ನಡೆದಿದ್ದು ಈ ದುರಂತ ಅಂತ್ಯಕ್ಕೆ ಕಾರಣವಾಗಿರಬಹುದು ಎಂದು ಅನಮಾನ ವ್ಯಕ್ತ ಪಡಿಸಿರುವ ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com