ನಿರ್ಮಲಾ ಸೀತಾರಾಮನ್ ಫ್ರಾನ್ಸ್ ಗೆ ತುರ್ತು ಭೇಟಿ ನೀಡಿದ್ದೇಕೆ?: ರಾಹುಲ್ ಪ್ರಶ್ನೆ

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇದ್ದಕ್ಕಿದ್ದಂತೆ ಫ್ರಾನ್ಸ್ ಗೆ ತುರ್ತು ಭೇಟಿ ನೀಡುವ ಅಗತ್ಯ ಏನಿತ್ತು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ....
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇದ್ದಕ್ಕಿದ್ದಂತೆ ಫ್ರಾನ್ಸ್ ಗೆ ತುರ್ತು ಭೇಟಿ ನೀಡುವ ಅಗತ್ಯ ಏನಿತ್ತು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಿರ್ಮಲಾ ಸೀತರಾಮನ್ ತುರ್ತಾಗಿ ಫ್ರಾನ್ಸ್ ನ ರಾಫೇಲ್ ಘಟಕಕ್ಕೆ ಏಕೆ ತೆರಳಿದ್ದಾರೆ, ಸರ್ಕಾರದ ರಾಫೇಲ್ ಡೀಲ್ ಬಗ್ಗೆ ಮುಚ್ಚಿ ಹಾಕಲು ಫ್ರಾನ್ಸ್ ಗೆ ತೆರಳಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಮೂರು ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವ ನಿರ್ಮಲಾ ಸೀತಾರಾಮನ್ ಭಾರತಕ್ಕಾಗಿ  ರಾಫೇಲ್ ಯುದ್ದ ವಿಮಾನ ತಯಾರಾಗುತ್ತಿರುವ ಡಾಸಲ್ಟ್ ಘಟಕಕ್ಕೆ ಏಕೆ ಭೇಟಿ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷ  ಪ್ರಾನ್ಸಿಸ್ಕೋ ಹಾಲಂಡೆ ಭಾರತದ ಪ್ರಧಾನಿ ರಿಲಯನ್ಸ್ ಗೆ ಡೀಲ್ ಸಿಗಬೇಕು ಎಂದು ತಿಳಿಸಿದ್ದರು ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದರು,  ರಾಫೇಲ್ ನ ಹಿರಿಯ ಅಧಿಕಾರಿಗಳು ಕೂಡ ಇದನ್ನೆ ಹೇಳಿದ್ದರು.ಇದು ಭ್ರಷ್ಟಾಚಾರದಿಂದ ಕೂಡಿದ ಕೇಸ್ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ದೇಶದ ಪ್ರಧಾನಿ ಭ್ರಷ್ಟ ಎಂಬುದನ್ನು ನಾನು ದೇಶದ ಯುವಕರಿಗೆ ಹೇಳಲು ಬಯಸುತ್ತೇನೆ ಎಂದು ಆರೋಪಿಸಿದ್ದಾರೆ.
ನರೇಂದ್ರ ಮೋದಿ ಅನಿಲ್ ಅಂಬಾನಿ ಅವರಿಗೆ ಚೌಕಿದಾರ,  ಅನಿಲ್ ಅಂಬಾನಿಗೆ ಲಾಭ ಮಾಡಿಕೊಡಲು ಪ್ರಧಾನಿ ಆಗಿದ್ದಾರೆ,. ಮೋದಿ ಅವರು ನೆನಪಿನಲ್ಲಿಟ್ಟುಕೊಳ್ಳಬೇಕು, ಒಂದು ವೇಳೆ ಆರೋಪಗಳಿಗೆ ಉತ್ತರ ನೀಡಲು ಆಗದಿದ್ದರೇ ಅವರು ಕಡ್ಡಾಯವಾಗಿ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com