
ಮುಂಬೈ: #ಮಿಟೂ ಅಭಿಯಾನ ದೇಶದ ಮಾಧ್ಯಮ ಕ್ಷೇತ್ರದಲ್ಲೂ ರಿಂಗಣಿಸಿದ ನಂತರ ಇದೀಗ ಕಾರ್ಪೋರೇಟ್ ಕ್ಷೇತ್ರದಲ್ಲೂ ಅನುರಣಿಸುತ್ತಿದೆ.
ಟಾಟಾ ಮೋಟಾರ್ ಕಾರ್ಪೋರೇಷನ್ ಗೆ ಸಂವಹನ ವಿಭಾಗದ ಮುಖ್ಯಸ್ಥ ಸುರೇಶ್ ರಂಗರಾಜನ್ ಅವರ ವಿರುದ್ಧ ಲೈಂಗಿಕ ಆರೋಪ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ರಜೆ ಮೇಲೆ ಕಳುಹಿಸಲಾಗಿದೆ.
ಕೆಲಸ ಮಾಡುವ ಸ್ಥಳದಲ್ಲಿ ಪ್ರತಿಯೊಬ್ಬರಿಗೊ ಗೌರವ ಹಾಗೂ ಸುರಕ್ಷತೆ ಒದಗಿಸಲು ನಾವು ಯಾವಾಗಲೂ ಪ್ರಯತ್ನಿಸುತ್ತೇವೆ. ಯಾವುದೇ ಆರೋಪ ಕೇಳಿಬಂದರೂ ಕೂಡಲೇ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಟಾಟಾ ಮೋಟಾರ್ಸ್ ನಿನ್ನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿತ್ತು.
ರಂಗರಾಜನ್ ಕೆಲ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಟ್ವೀಟರ್ ನಲ್ಲಿ ಹಂಚಿಕೆಯಾದ ನಂತರ ಈ ವಿಷಯ ತಡವಾಗಿ ಬೆಳಕಿಗೆ ಬಂದಿತ್ತು.
Advertisement