ಝಾಕೀರ್ ನಾಯಕ್
ಝಾಕೀರ್ ನಾಯಕ್

ಮುಂಬೈ: ಝಾಕೀರ್ ನಾಯಕ್ ಗೆ ಸೇರಿದ ನಾಲ್ಕು ಆಸ್ತಿಗಳ ಲಗತ್ತಿಸಲು ಎನ್ಐಎ ವಿಶೇಷ ಕೋರ್ಟ್ ಅನುಮತಿ

ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಅಪರಾಧಿ ಎಂದು ಗುರುತಿಸಲ್ಪಟ್ಟಿರುವ ಇಸ್ಲಾಮಿಕ್ ಶಿಕ್ಷಕ ಝಾಕೀರ್ ನಾಯಕ್ ಅವರಿಗೆ ಸೇರಿದ ಮುಂಬೈನ ನಾಲ್ಕು ಆಸ್ತಿಗಳ.....
Published on
ಮುಂಬೈ: ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಅಪರಾಧಿ ಎಂದು ಗುರುತಿಸಲ್ಪಟ್ಟಿರುವ ಇಸ್ಲಾಮಿಕ್ ಬೋಧಕ ಝಾಕೀರ್ ನಾಯಕ್ ಅವರಿಗೆ ಸೇರಿದ ಮುಂಬೈನ ನಾಲ್ಕು ಆಸ್ತಿಗಳನ್ನು ಲಗತ್ತಿಸುವಂತೆ ಎನ್ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ
ಎರಡು ವರ್ಷಗಳ ಹಿಂದೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಆಪಾದಿತನಾಗಿರುವ ಝಾಕೀರ್ ನಾಯಕ್ ಅವರನ್ನು 2017ರಲ್ಲಿ ನ್ಯಾಯಾಲಯವು ಘೋಷಿತ ಆರೋಪಿ ಎಂದು ಹೇಳಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಝಾಕೀರ್ ನಾಯಕ್ ಗೆ ಸೇರಿದ್ದ ಮುಂಬೈನ ಮಜ್ಗಾವ್ ಪ್ರದೇಶದಲ್ಲಿನ ನಾಲ್ಕು ಫ್ಲ್ಯಾಟ್ ಗಳನ್ನು ಮತ್ತು ವಾಣಿಜ್ಯೋದ್ದೇಶಿತ ಕಟ್ಟಡ ವನ್ನು ಲಗತ್ತಿಸಲು  ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗೆ ಕೋರ್ಟ್ ಅನುಮತಿ ನೀಡಿದೆ.
ಝಾಕಿರ್ ನಾಯಕ್ ತಮ್ಮ ಒಡೆತನದಲ್ಲಿರುವ ಈ ಆಸ್ತಿಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ, ತನಿಖಾ ಸಂಸ್ಥೆ ಇದನ್ನು ಮುಟ್ಟುಗೋಲು ಹಾಕಿಕೊಳ್ಳುವ ಸೂಚನೆ ದೊರೆತ ಬಳಿಕ ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆನ್ನುವ ಎನ್ಐಎ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಅವರ ಆಸ್ತಿಗಳನ್ನು ಲಗತ್ತಿಸಿಕೊಳ್ಳಲು ಅನುಮತಿ ನೀಡಿದೆ.
ಎನ್ಐಎ ಪರವಾಗಿ ಕೋರ್ಟ್ ನಲ್ಲಿ ವಾದ ಮಂಡಿಸಿದ ವಕೀಲ ಆನಂದ್ ಸುಖದೇವ್ ನಾಯಕ್  ಹಲವಾರು ವಿದೇಶಿ ರಾಷ್ಟ್ರಗಳಲ್ಲಿ ಪೌರತ್ವವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆಂದು ನ್ಯಾಯಾಲಯಕ್ಕೆ ತಿಳಿಸಿದರು ಮತ್ತು ಈ ಮಜ್ಗಾನ್ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಹಣ ಸಂಗ್ರಹದ ಉದ್ದೇಶವನ್ನು ಹೊಂದಿದ್ದಾರೆ ಎಂದರು.
ನವೆಂಬರ್ 2016 ರಲ್ಲಿ, ಕೇಂದ್ರ ಸರ್ಕಾರವು ನಾಯಕ್ ಮುಂಬೈ ಮೂಲದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಅನ್ನು ಯುಎಪಿಎ ಅಡಿಯಲ್ಲಿ "ಕಾನೂನುಬಾಹಿರ" ಸಂಘಟನೆ ಎಂದು ಘೋಷಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com