ಮತಾದಾರರ ಪಟ್ಟಿಯಲ್ಲಿ ಲೋಪದೋಷ: ಸುಪ್ರೀಂನಿಂದ ಕಮಲ್ ನಾಥ್, ಸಚಿನ್ ಪೈಲಟ್ ಅರ್ಜಿ ವಜಾ

ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿನ ಮತದಾರರ ಕರಡು ಪಟ್ಟಿಯನ್ನು ಪಠ್ಯ ರೂಪ್ಯದಲ್ಲಿ ಒದಗಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡಬೇಕೆಂದು ...
ಸಚಿನ್ ಪೈಲಟ್ ಮತ್ತು ಕಮಲನಾಥ್
ಸಚಿನ್ ಪೈಲಟ್ ಮತ್ತು ಕಮಲನಾಥ್
ನವದೆಹಲಿ:  ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿನ ಮತದಾರರ ಕರಡು ಪಟ್ಟಿಯನ್ನು ಪಠ್ಯ ರೂಪ್ಯದಲ್ಲಿ ಒದಗಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡಬೇಕೆಂದು ಕೋರಿ ಹಿರಿಯ ಕಾಂಗ್ರೆಸ್‌ ನಾಯಕರಾದ ಕಮಲ್‌ ನಾಥ್‌ ಮತ್ತು ಸಚಿನ್‌ ಪೈಲಟ್‌ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇಂದು ವಜಾ ಮಾಡಿದೆ. 
ಮಧ್ಯಪ್ರದೇಶದಲ್ಲಿ ನ.28ರಂದು ಮತ್ತು ರಾಜಸ್ಥಾನದಲ್ಲಿ ಡಿ.7ರಂದು ವಿಧಾನಸಭಾ ಚುನಾವಣೆ ನಡೆಯಲಿದೆ.
ನ್ಯಾಯಮೂರ್ತಿ ಎ ಕೆ ಸಿಕ್ರಿ ಮತ್ತು ಅಶೋಕ್‌ ಭೂಷಣ್‌ ಅವರನ್ನು ಒಳಗೊಂಡ ಸುಪ್ರೀಂ ಪೀಠ, "ನಾವು ಈ ಅರ್ಜಿಗಳನ್ನು ವಜಾ ಮಾಡುತ್ತಿದ್ದೇವೆ' ಎಂದು ಹೇಳಿದೆ. ಮದ್ಯಪ್ರದೇಶದ ಮತದಾರರ ಪಟ್ಟಿಯಲ್ಲಿ 60 ಸಾವಿರ ನಕಲಿ ಮತದಾರರ ಹೆಸರಿದೆ ಎಂದು ಕಮಲ್ ನಾಥ್ ಆರೋಪಿಸಿದ್ದರು. 
ಮತದಾರರ ಪಟ್ಟಿಯಲ್ಲಿ ಅನೇಕ ಹೆಸರುಗಳು ಹಲವು ಬಾರಿ ಕಂಡು ಬರುತ್ತಿರುವ ಕಾರಣ ಮುಕ್ತ ಮತ್ತು ನ್ಯಾಯೋಚಿತ ಚುನಾವಣೆಗಳನ್ನು ನಡೆಸುವ ಸಲುವಾಗಿ ಈ ದೋಷಗಳನ್ನು ಸರಿಪಡಿಸಬೇಕಾಗಿದೆ ಎಂಬ ಅರ್ಜಿಗಳ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್‌ ಅ.8ರಂದು ಕಾದಿರಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com