ದಕ್ಷಿಣ ಭಾರತಕ್ಕಿಂತ ಪಾಕ್ ಭೇಟಿ ಉತ್ತಮವಾಗಿತ್ತು: ನವಜೋತ್ ಸಿಂಗ್ ಸಿಧು ವಿವಾದ

ಭಾಷೆ ಹಾಗೂ ಆಹಾರ ವಿಚಾರದಲ್ಲಿ ದಕ್ಷಿಣ ಭಾರತಕ್ಕಿಂತಲೂ ಪಾಕಿಸ್ತಾನ ಮೇಲು ಎಂದು ಮಾಜಿ ಕ್ರಿಕೆಟಿಗ, ಪಂಜಾಬ್ ಸಚಿವ ನಜೋತ್ ಸಿಂಗ್ ಸಿಧು ಅಭಿಪ್ರಾಯಪಟ್ಟಿದ್ದಾರೆ.
ನಜೋತ್ ಸಿಂಗ್ ಸಿಧು
ನಜೋತ್ ಸಿಂಗ್ ಸಿಧು
Updated on: 
ನವದೆಹಲಿ: ಭಾಷೆ ಹಾಗೂ ಆಹಾರ ವಿಚಾರದಲ್ಲಿ ದಕ್ಷಿಣ ಭಾರತಕ್ಕಿಂತಲೂ ಪಾಕಿಸ್ತಾನ ಮೇಲು ಎಂದು ಮಾಜಿ ಕ್ರಿಕೆಟಿಗ, ಪಂಜಾಬ್ ಸಚಿವ ನಜೋತ್ ಸಿಂಗ್ ಸಿಧು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಪಾಕ್ ಮೇಲಿನ ತಮ್ಮ ಒಲವನ್ನು ಇನ್ನೊಮ್ಮೆ ಬಹಿರಂಗಪಡಿಸಿದ್ದಾರೆ.
ದಕ್ಷಿಣ ಭಾರತದ ಭೇಟಿಗಿಂತ ಪಾಕಿಸ್ತಾನದ ಭೇಟಿ ನನಗೆ ಹೆಚ್ಚು ಖುಷಿ ಕೊಟ್ಟಿದೆ ಎಂದು ಸಿಧು ಹೇಳಿದ್ದಾರೆ. ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿಧು ಈ ಹೇಳಿಕೆ ನೀಡಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ.
"ನಾನು ದಕ್ಷಿಣ ಬಾರತಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಭಾಷೆ, ಆಹಾರ ಶೈಲಿ ಎಲ್ಲವೂ ಭಿನ್ನವಾಗಿದ್ದು ನನಗೆ ಅಲ್ಲಿನ ಭಾಷೆ ಅರ್ಥೈಸಿಸ್ಕೊಳ್ಳುವುದು ಕಠಿಣವಾಗಿತ್ತು. ಅದೇ ಪಾಕಿಸ್ತಾನಕ್ಕೆ ಹೋದಾಗ ಅಲ್ಲಿ ಎಲ್ಲವೂ ಒಂದೇ ಆಗಿತ್ತು. ಆಂಗ್ಲ ಭಾಷೆಯಲ್ಲಿ ಹತ್ತು ಬಾರಿ ಬೈಯುವುದಕ್ಕೆ ಬದಲು ಪಂಜಾಬಿಯಲ್ಲಿ ಒಂದೇ ಬಾರಿ ಬೈಯ್ದರೆ ಉತ್ತಮ" ಎಂದು ಅವರು ಹೇಳಿದ್ದಾರೆ.
ಅಲ್ಲದೆ ಸಿಧು ಪಾಕ್ ಸೇನಾ ಮುಖ್ಯಸ್ಥರನ್ನು ತಬ್ಬಿಕೊಂಡ ವಿಚಾರಕ್ಕೆ ಸಂಬಂಧಿಸಿ ಸಮರ್ಥನೆ ನೀಡಿದ್ದಾರೆ. ತನಗೆ ಪಾಕ್ ಸೇನಾ ಮುಖ್ಯಸ್ಥರನ್ನು ತಬ್ಬಿಕೊಂಡ ಬಗ್ಗೆ ಯಾವ ಮುಜುಗರವಿಲ್ಲ ಎಂದಿದ್ದು ಪಾಕ್ ಸೇನೆ ಪಂಜಾಬಿ ಸಮುದಾಯದವರಿಗೆ ಪಾಕಿಸ್ತಾನದಲ್ಲಿರುವ ಕರತಾರ್ ಪುರ ಗುರುದ್ವಾರಕ್ಕೆ ತೆರಳಲು ಗಡಿಯನ್ನು ಮುಕ್ತಗೊಳಿಸುವುದಾಗಿ ಭರವಸೆ ಇತ್ತಿದ್ದರು.ಇದಕ್ಕಾಗಿ ನಾನು ಅವರನ್ನು ತಬ್ಬಿಕೊಂಡಿದ್ದೆ ಎಂದಿದ್ದಾರೆ.
ಸಿಧು ಹೇಳಿಕೆ ಕುರಿತಂತೆ ಅನೇಕರು ಖಾರವಾಗಿ ಪ್ರತಿಕ್ರಯಿಸಿದ್ದು ಪಂಜಾಬ್ ಅಕಾಲಿ ದಳದ ಹಿರಿಯ ಮುಖಂಡ ಹೇಳುವಂತೆ ಸಿಧು ಭಾರತವನ್ನು ತುಳಿಯಲಿಕ್ಕಾಗಿ ಪಾಕಿಸ್ತಾನವನ್ನು ಹೊಗಲಿದ್ದಾರೆ ಎಂದರು.
ಬಿಜೆಪಿ ರಾಷ್ಟ್ರೀಯ ವಕ್ತಾರ ನಳಿನ್ ಕೊಹ್ಲಿ ಮಾತನಾಡಿ ಸಿಧು ದಕ್ಷಿಣ ಭಾರತವನ್ನು ಪಾಕಿಸ್ತಾನಕ್ಕೆ ಹೋಲಿಸಿರುವುದು ಖಂಡನಾರ್ಹವಾಗಿದೆ ಎಂದರು.
ಸಿಟಿ ರವಿ ಖಂಡನೆ
ಚಿಕ್ಕಮಗಳೂರು ಬಿಜ್ಜೆಪಿ ಮುಖಂಡ ಸಿಟಿ ರವಿ ಸಹ ಸಿಧು ಹೇಳಿಕೆಯನ್ನು ಖಂಡಿಸಿದ್ದಾರೆ. "ನವಜೋತ್ ಸಿಂಗ್ ಸಿಧು ಅವರಂತಹಾ ಕಾಂಗ್ರೆಸ್ ನ ಸೇವಕರು ಮಾತ್ರವೇ ದಕ್ಷಿಣ ಬಾರತವನ್ನು ಪಾಕಿಸ್ತಾನಕ್ಕೆ ಹೋಲಿಕೆ ಂಆಡಲು ಸಾಧ್ಯ.ಮತ್ತು ದಕ್ಷಿಣ ಭಾರತಕ್ಕಿಂತ ಭಯೋತ್ಪಾದಕರ ರಾಷ್ಟ್ರ ಪಾಕಿಸ್ತಾನ ಉತ್ತಮ ಎಂದು ಘೊಷಿಸಲು ಸಾಧ್ಯ. 
"ದಕ್ಷಿಣ ಭಾರತದ ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಯಾವುದೇ ಕಲ್ಪನೆಯಿಲ್ಲದ ಇಂತಹಾ ಜೋಕರ್ ಗಳ ಬಾಯಿ ಮುಚ್ಚಿಸಬೇಕಿದೆ" ಅವರು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com