ಪರಿಸರ ಸ್ವಚ್ಛತೆಯ ಸಂದೇಶ ನೀಡಲು ಮಿಥಿಲೆಯ 'ಜನಕ' ನಾದ ಕೇಂದ್ರ ಸಚಿವ ಹರ್ಷ ವರ್ಧನ್!

ಸಾಂಪ್ರಾದಾಯಿಕ ಉಡುಗೊರೆ , ತಲೆಯ ಮೇಲೆ ಕಿರೀಟ ತೊಟ್ಟು ಪರಿಶುದ್ಧ ಹಿಂದಿ ಮಾತನಾಡುತ್ತಿದ್ದ ಕೇಂದ್ರ ಸಚಿವ ಹರ್ಷ ವರ್ಧನ್ ವಿಶೇಷವಾಗಿ ಕಾಣುತ್ತಿದ್ದರು....
ಜನಕನ ಪಾತ್ರದಲ್ಲಿ ಹರ್ಷವರ್ದನ್
ಜನಕನ ಪಾತ್ರದಲ್ಲಿ ಹರ್ಷವರ್ದನ್
ನವದೆಹಲಿ: ಸಾಂಪ್ರಾದಾಯಿಕ ಉಡುಗೊರೆ , ತಲೆಯ ಮೇಲೆ ಕಿರೀಟ ತೊಟ್ಟು ಪರಿಶುದ್ಧ ಹಿಂದಿ ಮಾತನಾಡುತ್ತಿದ್ದ ಕೇಂದ್ರ ಸಚಿವ ಹರ್ಷ ವರ್ಧನ್ ವಿಶೇಷವಾಗಿ ಕಾಣುತ್ತಿದ್ದರು.
ಕೆಂಪುಕೋಟೆಯಲ್ಲಿ  ಲವಕುಶ ಕಮಿಟಿ ಆಯೋಜಿಸಿದ್ದ ರಾಮ್ ಲೀಲಾ  ಕಾರ್ಯಕ್ರಮದಲ್ಲಿ ಮಿಥಿಲೆಯ ದೊರೆ ಜನಕರಾಜನವಂತೆ ವೇಷ ತೊಟ್ಟು ಪರಿಸರ ಸ್ವಚ್ಥತೆಯ ಬಗ್ಗೆ ಸಂದೇಶ ನೀಡಿದ್ದಾರೆ.
ರಾಜಪೋಷಾಕು ತೊಟ್ಟು ದೊಡ್ಡ ಮೀಸೆಯಿಂದಾಗಿ ಧರಿಸಿದ್ದ ಹರ್ಷ ವರ್ಧನ್ ಅವರನ್ನು ಗುರುತು ಹಚ್ಚಲು ಸಾಗಧ್ಯವಾಗುತ್ತಿರಲಿಲ್ಲ, ಅಷ್ಟರ ಮಟ್ಟಿಗೆ ಮೇಕಪ್ ಮಾಡಿಕೊಡಿದ್ದರು.
ಕೆಂಪುಕೋಟೆಯದ ಬಹುದೊಡ್ಡ ವೇದಿಕೆಯಲ್ಲಿ ಮಿಥಿಲೆಯ ರಾಜ ಜನಕನಾಗಿ ಹರ್ಷವರ್ಧನ್  ರಾಮನ ಜೊತೆ ಸಂಭಾಷಣೆ ನಡೆಸುವ ಪಾತ್ರವದು. ಜನತೆಗೆ ಸಚ್ಛತೆಯ ಬಗ್ಗೆ ಸಂದೇಶ ನೀಡಿದ್ದಾಗಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com