ಗೋವಾ ಬಿಜೆಪಿ ವೆಬ್ ಸೈಟ್ ಹ್ಯಾಕ್, 'ಪಾಕಿಸ್ತಾನ್ ಜಿಂದಾಬಾದ್' ಪೋಸ್ಟ್

ಬಿಜೆಪಿ ಗೋವಾ ಘಟಕದ ಹಳೆ ವೆಬ್ ಸೈಟ್ ಅನ್ನು ಸೋಮವಾರ ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು, ಪಾಕಿಸ್ತಾನ ಜಿಂದಾಬಾದ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪಣಜಿ: ಬಿಜೆಪಿ ಗೋವಾ ಘಟಕದ ಹಳೆ ವೆಬ್ ಸೈಟ್ ಅನ್ನು ಸೋಮವಾರ ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು, ಪಾಕಿಸ್ತಾನ ಜಿಂದಾಬಾದ್ ಎಂಬ ಪೋಸ್ಟ್ ಹಾಕಿದ್ದಾರೆ ಎಂದು ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ.
'ಟೀಂ ಪಿಎಸ್ಇ' ಈ ಸೈಬರ್ ದಾಳಿ ಮಾಡಿರುವ ಸಾಧ್ಯತೆ ಇದ್ದು, ಮೊಹಮ್ಮದ್ ಬಿಲಾಲ್ ಎಂಬ ವ್ಯಕ್ತಿ ಸಹ ಹ್ಯಾಕ್ ಮಾಡಿದ ಸೈಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹ್ಯಾಕರ್ ವೆಬ್ ಸೈಟ್ ನಲ್ಲಿ "mailto:catch.if.you.can@hotmail.com" ಎಂಬ ಸಂದೇಶವನ್ನು ಹಾಕಿದ್ದಾರೆ.
ಇದು ಗೋವಾ ಬಿಜೆಪಿ ಘಟಕದ ಹಳೆ ವೆಬ್ ಸೈಟ್ ಆಗಿದ್ದು, ಹೊಸ ವೆಬ್ ಸೈಟ್ ನಲ್ಲಿ ಆ್ಯಂಟಿ ಹ್ಯಾಕಿಂಗ್ ಭದ್ರತೆಯನ್ನು ಅಳವಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೈಬರ್ ದಾಳಿಗೆ ಸಂಬಂಧಿಸಿದಂತೆ ಗೋವಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ್ ತನವಾಡೆ ಅವರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com