ಮಾನನಷ್ಟ ಪ್ರಕರಣದ ವಿರುದ್ಧ ಹೋರಾಟಕ್ಕೆ ಸಿದ್ದ: ಸಚಿವ ಅಕ್ಬರ್ ಗೆ ಪ್ರಿಯಾ ರಮಣಿ ತಿರುಗೇಟು

ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಕ್ಕಾಗಿ ತಮ್ಮ ವಿರುದ್ಧ ಖಾಸಗಿ ಮಾನನಷ್ಟ ದೂರು ದಾಖಲಿಸಿದ್ದ ವಿದೇಶಾಂಗ ವ್ಯವಹಾರಗಳ ಇಲಾಖೆ ರಾಜ್ಯ ಸಚಿವ ಎಂಜೆ ಅಕ್ಬರ್ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ....
ಎಂಜೆ ಅಕ್ಬರ್
ಎಂಜೆ ಅಕ್ಬರ್
ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಕ್ಕಾಗಿ ತಮ್ಮ ವಿರುದ್ಧ ಖಾಸಗಿ ಮಾನನಷ್ಟ ದೂರು ದಾಖಲಿಸಿದ್ದ ವಿದೇಶಾಂಗ ವ್ಯವಹಾರಗಳ ಇಲಾಖೆ ರಾಜ್ಯ ಸಚಿವ ಎಂಜೆ ಅಕ್ಬರ್ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ ತಿರುಗಿ ಬಿದ್ದಿದ್ದಾರೆ.
ಟ್ವಿಟ್ಟರ್ ನಲ್ಲಿ ಪ್ರತಿಕ್ರಯಿಸಿರುವ ರಮಣಿ ಭಯ ಹಾಗೂ ಕಿರುಕುಳದ ಮೂಲಕ ಮಹಿಳೆಯರ ದನಿಯನ್ನು ಅಡಗಿಸಲು ಅಕ್ಬರ್ ಯತ್ನಿಸುತ್ತಾರೆ ಎಂದು ಆರೋಪಿಸಿದ್ದಾರೆ.
"ಹಲವು ಮಹಿಳೆಯರು ಮಾಡಿದ ಆರೋಪಗಳನ್ನು ಕೇಂದ್ರ ಸಚಿವರು ನಿರಾಕರಿಸಿದ್ದಲ್ಲದೆ ಅವರ ಸ್ಥಾನದಿಂದ ವಜಾಗೊಳಿಸದ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ನನಗೆ ತೀವ್ರ ನಿರಾಶೆಯಾಗಿದೆ.ನನ್ನ ವಿರುದ್ಧ ಮಾನನಷ್ಟ ಪ್ರಕರಣವೊಂದನ್ನು ದಾಖಲಿಸುವ ಮೂಲಕ ಅಕ್ಬರ್ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅನೇಕ ಮಹಿಳೆಯರು ಅವರ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ ಸಚಿವರು ಭಯ ಹಾಗೂ ಕಿರುಕುಳದ ಮೂಲಕ ಮಹಿಳೆಯರ ದನಿ ಅಡಗಿಸಲು ನೋಡುತ್ತಿದ್ದಾರೆ" ಟ್ವಿಟ್ಟರ್ ನಲ್ಲಿ ಅವರು ಬರೆದಿದ್ದಾರೆ.
"ನನ್ನ ವಿರುದ್ಧ ಹಾಕಿರುವ ಮೊಕದ್ದಮೆಗಾಗಿ  ಹೋರಾಡಲು ನಾನು ಸಿದ್ಧನಾಗಿದ್ದೇನೆ, ನನ್ನ ಬಳಿ ಸಂಪೂರ್ಣ ಸತ್ಯವಿದೆ, ಇದೇ ನನ್ನ ಏಕೈಕ ರಕ್ಷಣೆ ಎಂದು ಣಾನು ಹೇಳುತ್ತೇನೆ" ರಮಣಿ ಹೇಳಿದ್ದಾರೆ.
ಆಕೆಯ ಸಂಪೂರ್ಣ ಹೇಳಿಕೆ ಈ ಕೆಳಗಿನಂತಿದೆ-

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com