#MeToo: ವೈಯುಕ್ತಿಕ ಲಾಭಕ್ಕಾಗಿ ಮಹಿಳೆಯರು ರಾಜಿ ಮಾಡಿಕೊಳ್ಳುತ್ತಿದ್ದಾರೆ: ಮ. ಪ್ರದೇಶ ಬಿಜೆಪಿ ಶಾಸಕಿ

ನೈತಿಕ ಮೌಲ್ಯಗಳ" ಜೊತೆ ರಾಜಿ ಮಾಡಿಕೊಳ್ಳುವುದರಿಂದಾಗಿ ಲೈಂಗಿಕ ಕಿರುಕುಳದಂತಹಾ ಸಮಸ್ಯೆಗಳು ಉಂಟಾಗುತ್ತದೆ ಎಂದು ಮಧ್ಯ ಪ್ರದೇಶದ ಬಿಜೆಪಿ ಉಪಾಧ್ಯಕ್ಷೆ ಉಷಾ ಠಾಕೂರ್ ಹೇಳಿದ್ದಾರೆ.
ಉಷಾ ಠಾಕೂರ್
ಉಷಾ ಠಾಕೂರ್
ಇಂದೋರ್ (ಮಧ್ಯ ಪ್ರದೇಶ): ನೈತಿಕ ಮೌಲ್ಯಗಳ" ಜೊತೆ ರಾಜಿ ಮಾಡಿಕೊಳ್ಳುವುದರಿಂದಾಗಿ ಲೈಂಗಿಕ ಕಿರುಕುಳದಂತಹಾ ಸಮಸ್ಯೆಗಳು ಉಂಟಾಗುತ್ತದೆ ಎಂದು ಮಧ್ಯ ಪ್ರದೇಶದ ಬಿಜೆಪಿ ಉಪಾಧ್ಯಕ್ಷೆ ಉಷಾ ಠಾಕೂರ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿದ ಕಾಂಗ್ರೆಸ್ ಬಿಜೆಪಿ ನಾಯಕಿ ಠಾಕೂರ್ ಹೇಳಿಕೆ  ಆಡಳಿತ ಪಕ್ಷದ "ವಿರೋಧಿ ಚಿಂತನೆ"ಯ ಉದಾಹರಣೆಯಾಗಿದೆ. ಎಂದು ಟೀಕಿಸಿದೆ.
ಇದಕ್ಕೆ ಮುನ್ನ ಠಾಕೂರ್ "ಮೀಟೂ" ಅಭಿಯಾನದ ಕುರಿತು ವರದಿಗಾರರ ಪ್ರಶ್ನೆಗೆ ಠಾಕೂರ್ ಉತ್ತರಿಸಿದ್ದರು.
"ವೈಯಕ್ತಿಕ ಲಾಭಕ್ಕಾಗಿ ನಾವು ನೈತಿಕ ಮೌಲ್ಯಗಳು ಮತ್ತು ಸಿದ್ಧಾಂತಗಳೊಂದಿಗೆ ನಾವು ರಾಜಿ ಮಾಡಿಕೊಳ್ಳುವ ಕಾರಣ ಇಂತಹಾ ಸಮಸ್ಯೆ ಉದ್ಭವಿಸುತ್ತದೆ.ಇದು ನನ್ನ ಸ್ಪಷ್ಟವಾದ ಕಲ್ಪನೆಯಾಗಿದೆ"
"ಎಲ್ಲ ಮಹಿಳೆಯರೂ ಮತ್ತು ತನ್ನೆಲ್ಲಾ ಸಹೋದರರ ಕುರಿತು ನಾನು ಕೇಳುವುದೆಂದರೆ ಎಂದಿಗೂ ನಮ್ಮ ಒಳಿತಿಗಾಗಿ ಸಣ್ಣ ಮಾರ್ಗಗಳನ್ನು ಅನುಸರಿಸಬಾರದು.ನೈತಿಕತೆ ಹಾಗೂ ಜೀವನ ಮೌಲ್ಯಗಳ ಕುರಿತು ರಾಜಿ ಮಾಡಿಕೊಳ್ಳುವುದು ಅತಿ ಕೆಟ್ಟದಾಗಿದ್ದು ಹೀಗೆ ರಾಜಿಯಾಗುವ ಮೂಲಕ ಯಶಸ್ಸು ಸಾಧಿಸುವುದು ಭಾರತೀಯ ಸಂಸ್ಕೃತಿಯಲ್ಲ" ಅವರು ಹೇಳಿದರು.
ಠಾಕೂರ್ ಮಾತಿಗೆ ಪ್ರತಿಕ್ರಯಿಸಿರುವ ಕಾಂಗ್ರೆಸ್ ಮಾದ್ಯಮ ಸೆಲ್ ಅಧ್ಯಕ್ಷೆ ಶೋಭಾ ಓಝಾ ಬಿಜೆಪಿ ನಾಯಕಿಯ ಹೇಳಿಕೆ ಆಡಳಿತಾರೂಢ ಪಕ್ಷದ ಮಹಿಳಾ ವಿರೋಧಿ ಚಿಂತನೆಯನ್ನು ತೋರಿಸಿದೆ ಎಂದಿದ್ದಾರೆ.
"ಇಂತಹ ಚಿಂತನೆಯಿಂದಾಗಿ ಮಹಿಳೆಯರು ಮತ್ತು ಯುವತಿಯರ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೇ ಕಾರಣಕ್ಕಾಗಿ (ಮಹಿಳಾ ವಿರೋಧಿ ವರ್ತನೆ) ಬಿಜೆಪಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಅವರನ್ನು ಲೈಂಗಿಕ ಕಿರುಕುಳದ ಗಂಭೀರ ಆರೋಪದಿಂದ ರಕ್ಷಿಸಲು ಪ್ರಯತ್ನ ನಡೆದಿದೆ" ಓಜಾ ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com