ಸುಪ್ರೀಂ ಆದೇಶಕ್ಕೆ ಡೋಂಟ್ ಕೇರ್ : ಶಬರಿಮಲೆ ಮಹಿಳೆಯರ ಪ್ರವೇಶಕ್ಕೆ ತಡೆ!

ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸುವುದಾಗಿ ಎಲ್ ಡಿಎಫ್ ಸರ್ಕಾರದ ಮುಖ್ಯಮಂತ್ರಿ ಪಿಣರಾಯ್ ವಿಜಯ್ ಹೇಳುತ್ತಿದ್ದರೂ ಇಂದು ಶಬರಿಮಲೆಯ ನೀಲಕಂಠದಲ್ಲಿ ಕೆಎಸ್ ಆರ್ ಟಿಸಿ ಬಸ್ ನಿಂದ ಮಹಿಳಾ ಭಕ್ತಾಧಿಗಳನ್ನು ಪ್ರತಿಭಟನಾಕಾರರು ಹೊರದಬ್ಬಿದ ಘಟನೆ ನಡೆದಿದೆ.
ಶಬರಿಮಲೆ ದೇವಾಲಯ
ಶಬರಿಮಲೆ ದೇವಾಲಯ

ನೀಲಕಂಠ: ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆಗೆ ಮಹಿಳೆಯರ ಅವಕಾಶ ಕಲ್ಪಿಸುವ ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸುವುದಾಗಿ ಎಲ್ ಡಿಎಫ್ ಸರ್ಕಾರದ ಮುಖ್ಯಮಂತ್ರಿ ಪಿಣರಾಯ್ ವಿಜಯ್ ಹೇಳುತ್ತಿದ್ದರೂ ಇಂದು ಶಬರಿಮಲೆಯ  ನೀಲಕಂಠದಲ್ಲಿ ಕೆಎಸ್ ಆರ್ ಟಿಸಿ ಬಸ್ ನಿಂದ ಮಹಿಳಾ ಭಕ್ತಾಧಿಗಳನ್ನು ಪ್ರತಿಭಟನಾಕಾರರು ಹೊರದಬ್ಬಿದ ಘಟನೆ ನಡೆದಿದೆ.

ತುಳ್ಳಂ ಪೂಜೆಗಾಗಿ ನಾಳೆಯಿಂದ ದೇವಸ್ಥಾನ ಪುನರ್ ಆರಂಭಗೊಳ್ಳಲಿದೆ. ಈ ಮಧ್ಯೆ ಯಾರೊಬ್ಬರು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ವಿಜಯ್ ಪಿಣರಾಯ್  ಎಚ್ಚರಿಕೆಯ ಸಂದೇಶ ರವಾನಿಸಿದ್ದು, ಶಬರಿಮಲೆಗೆ ತೆರಳುವ ಎಲ್ಲ ಭಕ್ತರೂ ಪೂಜೆ ಸಲ್ಲಿಸಲು ಸರ್ಕಾರ ಎಲ್ಲಾ ವ್ಯವ್ಯಸ್ಥೆ ಮಾಡಲಿದೆ ಎಂದು ಹೇಳಿದ್ದಾರೆ.

ಪಂಪಾ ನದಿ ದಂಡೆಯಲ್ಲಿ ಮಹಿಳಾ ಪೊಲೀಸ್  ಸಿಬ್ಬಂದಿ ನಿಯೋಜಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳ ಮೂಲಗಳಿಂದ ತಿಳಿದುಬಂದಿದೆ. ಈ ಹಿಂದೆಯೂ ಕೂಡಾ ಮಹಿಳಾ ಅಧಿಕಾರಿಗಳನ್ನು ಆಯೋಜಿಸಲಾಗಿತ್ತು, ಆದಾಗ್ಯೂ,  ಸನ್ನಿದಿಯಲ್ಲಿ ಮಹಿಳಾ ಅಧಿಕಾರಿ ನಿಯೋಜಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪರ ಹಾಗೂ ವಿರೋಧವಾದ ಅಭಿಪ್ರಾಯಗಳು ಕೇಳಿಬರುತ್ತಿದ್ದು, ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಸುಪ್ರೀಂಕೋರ್ಟ್ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ್ದರೆ. ಆಡಳಿತಾ ರೂಢ ಸಿಪಿಐ( ಎಂ)  ಅವರಿಗೆ ಪ್ರತಿಯಾಗಿ ನಡೆದುಕೊಳ್ಳುತ್ತಿದೆ.
ಈ ಬೆಳವಣಿಗೆ ಪ್ರತಿಭಟನೆ ಸ್ಥಳೀಯ ಮಟ್ಟಕ್ಕೂ ವ್ಯಾಪಿಸುವ ಭೀತಿಯಲ್ಲಿದ್ದಾರೆ ಪೊಲೀಸರು.ಆದಾಗ್ಯೂ, ಉಭಯ ಪಕ್ಷಗಳ ನಡುವೆ ಯಾವುದೇ ಹಿಂಸಾಚಾರ ಪ್ರಕರಣಗಳು ವರದಿಯಾಗಿಲ್ಲ. ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com