ಕೇಂದ್ರ ಸಚಿವ ಎಂಜೆ ಅಕ್ಬರ್‌ಗೆ ಸಂಕಷ್ಟ: ರಾಜಿನಾಮೆಗೆ ಆಗ್ರಹಿಸಿ ರಾಷ್ಟ್ರಪತಿಗೆ ಪತ್ರಕರ್ತೆಯರ ಆಗ್ರಹ!

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಎಂಜೆ ಅಕ್ಬರ್ ಅವರಿಗೆ ಸಂಕಷ್ಟ ಎದುರಾಗಿದ್ದು ಪತ್ರಕರ್ತೆಯರ ತಂಡವೊಂದು ಅಕ್ಬರ್ ಹುದ್ದೆಯಿಂದ ವಜಾ...
ಎಂಜೆ ಅಕ್ಬರ್-ಪ್ರಿಯಾ ರಮಣಿ
ಎಂಜೆ ಅಕ್ಬರ್-ಪ್ರಿಯಾ ರಮಣಿ
ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಎಂಜೆ ಅಕ್ಬರ್ ಅವರಿಗೆ ಸಂಕಷ್ಟ ಎದುರಾಗಿದ್ದು ಪತ್ರಕರ್ತೆಯರ ತಂಡವೊಂದು ಅಕ್ಬರ್ ಹುದ್ದೆಯಿಂದ ವಜಾ ಮಾಡುವಂತೆ ಆಗ್ರಹಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. 
ಮೀ ಟೂ ಅಭಿಯಾನ ನಂತರದಲ್ಲಿ 12 ಮಂದಿ ಮಹಿಳಾ ಪತ್ರಕರ್ತೆಯರು ಎಂಜೆ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ನಿನ್ನೆಯಷ್ಟೇ ಎಂಜೆ ಅಕ್ಬರ್ ತಮ್ಮ ವಿರುದ್ಧ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. 
ಇದರ ಬೆನ್ನಲ್ಲೇ ಇದೀಗ ದಿ ನೆಟ್ವರ್ಕ್ ಆಫ್ ವುಮನ್ ಇನ್ ಮೀಡಿಯಾ ಇನ್ ಇಂಡಿಯಾ(ಎನ್ಡಬ್ಲ್ಯೂಎಂಐ) ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದು, ಎಂಜೆ ಅಕ್ಬರ್ ಕೇಂದ್ರ ಸಚಿವರಾಗಿದ್ದು ತನಿಖೆ ಮೇಲೆ ಅವರು ಪ್ರಭಾವ ಬೀರಬಹುದು. ಈಗಿರುವಾಗ ಈ ಪ್ರಕರಣದಲ್ಲಿ ನ್ಯಾಯ ಮತ್ತು ನ್ಯಾಯಯುತವಾಗಿ ತನಿಖೆ ನಡೆಯುತ್ತದೆ ಎಂದು ಸಾರ್ವಜನಿಕರು ನಿರೀಕ್ಷಿಸಬಹುದಾ ಎಂದು ಪ್ರಶ್ನಿಸಿದ್ದಾರೆ.
ಹೀಗಾಗಿ ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕೆಂದು ಎನ್ಡಬ್ಲ್ಯೂಎಂಐ ರಾಷ್ಟ್ರಪತಿಗಳಿಗೆ ಮನವಿ ಮಾಡಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com