ಆನ್‌ಲೈನ್‌ನಲ್ಲಿ ಮೊಬೈಲ್ ಬುಕ್ ಮಾಡಿದವನಿಗೆ ಸಿಕ್ಕಿದ್ದು ಏನು ಗೊತ್ತ?

ಆನ್‌ಲೈನ್‌ನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ ಆನ್‌ಲೈನ್‌ನಲ್ಲಿ ಮೊಬೈಲ್ ಬುಕ್ ಮಾಡಿದವನಿಗೆ ಪಾರ್ಸಲ್ ವೊಂದನ್ನು...
ಇಟ್ಟಿಗೆ
ಇಟ್ಟಿಗೆ
ಔರಂಗಾಬಾದ್: ಆನ್‌ಲೈನ್‌ನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ ಆನ್‌ಲೈನ್‌ನಲ್ಲಿ ಮೊಬೈಲ್ ಬುಕ್ ಮಾಡಿದವನಿಗೆ ಪಾರ್ಸಲ್ ವೊಂದನ್ನು ಡಿಲಿವೆರಿ ಮಾಡಲಾಗಿತ್ತು. ಅದನ್ನು ಬಿಚ್ಚಿ ನೋಡಿದಾಗ ಗ್ರಾಹಕ ಬೆಪ್ಪಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 
ಪ್ರಮುಖ ಆನ್‌ಲೈನ್‌ ರಿಟೈಲ್ ನಲ್ಲಿ ವ್ಯಕ್ತಿಯೊರ್ವ 9 ಸಾವಿರ ಮುಖಬೆಲೆಯ ಮೊಬೈಲ್ ಫೋನ್ ಅನ್ನು ಬುಕ್ ಮಾಡಿದ್ದ. ತನಗೆ ಬಂದ ಪಾರ್ಸಲ್ ಅನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಇಟ್ಟಿಗೆ ತುಂಡು ಇರುವುದನ್ನು ಕಂಡ ಗ್ರಾಹಕ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾನೆ. 
ಔರಂಗಬಾದ್ ನ ಹುಡ್ಕೋ ಪ್ರದೇಶದಲ್ಲಿ ನೆಲೆಸಿರುವ ಗಜಾನನ್ ಖಾರತ್ ಅಕ್ಟೋಬರ್ 9ರಂದು ಆನ್‌ಲೈನ್‌ನಲ್ಲಿ ಮೊಬೈಲ್ ವೊಂದನ್ನು ಬುಕ್ ಮಾಡಿದ್ದಾರೆ. ಆದರೆ ಅವರಿಗೆ ಮೊಬೈಲ್ ಫೋನ್ ಬದಲಿಗೆ ಇಟ್ಟಿಗೆ ತುಂಡನ್ನು ಡೆಲಿವರಿ ಮಾಡಲಾಗಿದೆಯಂತೆ. ಆ ಸಂಬಂಧ ಆತ ದೂರು ನೀಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಮನೀಶ್ ಕಲ್ಯಾಣಕರ್ ಹೇಳಿದ್ದಾರೆ. 
ಇನ್ನು ಪಾರ್ಸೆಲ್ ಡೆಲಿವರಿಯಲ್ಲಿ ಇಟ್ಟಿಗೆ ತುಂಡನ್ನು ಕಂಡ ಕೂಡಲೇ ಗಜಾನನ್ ಡೆಲಿವರಿ ಮಾಡಿದವನಿಗೆ ಕರೆ ಮಾಡಿದ್ದಾರೆ. ಈ ವೇಳೆ ಡೆಲಿವರಿ ಬಾಯ್ ತಮಗೆ ಪಾರ್ಸೆಲ್ ಅನ್ನು ಡೆಲಿವರಿ ಮಾಡುವುದಷ್ಟೇ ಕೆಲಸ. ಇದಕ್ಕೂ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. 
ಐಪಿಸಿ ಸೆಕ್ಷನ್ ಅಡಿಯಲ್ಲಿ ಆನ್‌ಲೈನ್‌ ರಿಟೈಲ್ ಸಂಸ್ಥೆ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com