ಭಯೋತ್ಪಾದಕರು ತಾವು ಹಾರಿಸುವ ಗುಂಡುಗಳಿಗೆ ಪ್ರತಿಯಾಗಿ ಹೂವನ್ನು ಬಯಸಬಾರದು: ಜಮ್ಮು-ಕಾಶ್ಮೀರ ರಾಜ್ಯಪಾಲ

ಭಯೋತ್ಪಾದನೆ ವಿರುದ್ಧ ಕಠಿಣ ಸಂದೇಶ ನೀಡಿರುವ ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲೀಕ್, ಭಯೋತ್ಪಾದಕರಿಗೆ ಹೆಚ್ಚಿನ ಆಯುಷ್ಯವಿಲ್ಲ. ಅವರು ತಾವು ಹಾರಿಸುವ ಗುಂಡುಗಳಿಗೆ ಪ್ರತಿಯಾಗಿ ಹೂವನ್ನು
ಭಯೋತ್ಪಾದಕರು ತಾವು ಹಾರಿಸುವ ಗುಂಡುಗಳಿಗೆ ಪ್ರತಿಯಾಗಿ ಹೂವನ್ನು ಬಯಸಬಾರದು: ಜಮ್ಮು-ಕಾಶ್ಮೀರ ರಾಜ್ಯಪಾಲ
ಭಯೋತ್ಪಾದಕರು ತಾವು ಹಾರಿಸುವ ಗುಂಡುಗಳಿಗೆ ಪ್ರತಿಯಾಗಿ ಹೂವನ್ನು ಬಯಸಬಾರದು: ಜಮ್ಮು-ಕಾಶ್ಮೀರ ರಾಜ್ಯಪಾಲ
ಶ್ರೀನಗರ: ಭಯೋತ್ಪಾದನೆ ವಿರುದ್ಧ ಕಠಿಣ ಸಂದೇಶ ನೀಡಿರುವ ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲೀಕ್,  ಭಯೋತ್ಪಾದಕರಿಗೆ ಹೆಚ್ಚಿನ ಆಯುಷ್ಯವಿಲ್ಲ. ಅವರು ತಾವು ಹಾರಿಸುವ ಗುಂಡುಗಳಿಗೆ ಪ್ರತಿಯಾಗಿ ಹೂವನ್ನು ಬಯಸಬಾರದು ಎಂದಿದ್ದಾರೆ. 
ಕಾಶ್ಮೀರ ಪರಿಸ್ಥಿತಿ ಹದಗೆಟ್ಟಿಲ್ಲ ಎಂದು ಇದೇ ವೇಳೆ ರಾಜ್ಯಪಾಲರು ಸಮರ್ಥಿಸಿಕೊಂಡಿದ್ದು, ಸ್ಥಳೀಯರು ಭಯೋತ್ಪಾದಕ ಸಂಘಟನೆಗಳಿಗೆ ಸೇರುತ್ತಿರುವುದು ಕಡಿಮೆಯಾಗುತ್ತಿದ್ದು, ಕಲ್ಲು ತೂರಾಟದಲ್ಲೂ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ ಎಂದು ಹೇಳಿದ್ದಾರೆ. 
ಭಯೋತ್ಪಾದರು ಗುಂಡು ಹಾರಿಸಿದರೆ ಅವರಿಗೆ ಬುಲೆಟ್ ಗಳ ರೂಪದಲ್ಲೇ ಪ್ರತ್ಯುತ್ತರ ದೊರೆಯುತ್ತದೆಯೇ ಹೊರತು ಹೂಗುಚ್ಛಗಳು ದೊರೆಯುವುದಿಲ್ಲ.  ಭಯೋತ್ಪಾದಕರಿಗೆ ಹೆಚ್ಚಿನ ಆಯುಷ್ಯವಿಲ್ಲ. ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಾನು ರಾಜ್ಯಪಾಲನಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ 40 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಭಯೋತ್ಪಾದಕ ಸಂಘಟನೆಗಳನ್ನು ಸೇರುತ್ತಿರುವವರ ಸಂಖ್ಯೆ ಕಡಿಮೆಯಾಗಿದ್ದು ಕಲ್ಲು ತೂರಾಟವೂ ಕಡಿಮೆಯಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com