ಅಮೃತಸರ್ ರೈಲು ದುರಂತ: ಮೃತ ಕುಟುಂಬಕ್ಕೆ ರೂ.2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಅಮೃತಸರ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಆರ್ಥಿಕ ಪರಿಹಾರ ನೀಡಲು ಪ್ರಧಾನಿ ನರೇಂದ್ರ ಮೋದಿ ಸಮ್ಮತಿಸಿದ್ದಾರೆ...
ಅಮೃತಸರ್ ರೈಲು ದುರಂತ: ಸಂಗ್ರಹ ಚಿತ್ರ
ಅಮೃತಸರ್ ರೈಲು ದುರಂತ: ಸಂಗ್ರಹ ಚಿತ್ರ
ನವದೆಹಲಿ: ಅಮೃತಸರ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಆರ್ಥಿಕ ಪರಿಹಾರ ನೀಡಲು ಪ್ರಧಾನಿ ನರೇಂದ್ರ ಮೋದಿ ಸಮ್ಮತಿಸಿದ್ದಾರೆ.
ಪಂಜಾಬಿನ ಅಮೃತಸರದಲ್ಲಿ,ದಸರಾ ವಿಜಯದಶಮಿ ಸಂದರ್ಭ ರಾವಣ ದಹನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ರೈಲು ಹರಿದು 50 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು 72 ಮಂದಿ ಗಾಯಗೊಂಡಿದ್ದಾರೆ. ಜಲಂಧರ್ ನಿಂದ ರೈಲು ಆಗಮಿಸುತ್ತಿತ್ತು.
ಜೋಧಾ ಪಟಕ್ ನಲ್ಲಿ ಘಟನೆ ನಡೆದಿದ್ದು ಘಟನೆ ಸಮಯದಲ್ಲಿ ಸುಮಾರು  300 ಜನರು ರಾವಣ ದಹನ ಕಾರ್ಯಕ್ರಮವನ್ನು ವೀಕ್ಷಿಸಲು ನೆರೆದಿದ್ದರು.
ರೈಲು ದುರಂತದ ಬಗ್ಗೆ ಟ್ವೀಟ್ ಮಾಡಿ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ "ಅಮೃತಸರದಲ್ಲಿನ ರೈಲು ಅಪಘಾತದಿಂದ ತುಂಬಾ ದುಃಖಿತನಾಗುತ್ತಿದೆ. ಹೃದಯ ಹಿಂಡಿದಂತೆನಿಸಿದೆ.(ಘಟನೆಯಲ್ಲಿ) ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಸಾಂತ್ವನವಿದೆ.ಹಾಗೆಯೇ ಗಾಯಗೊಂಡವರು ತ್ವರಿತವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ.ಅಗತ್ಯವಿರುವ ತಕ್ಷಣದ ನೆರವು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದಿದ್ದಾರೆ.
ರೈಲ್ವೆ ಸಹಾಯವಾಣಿ
ಘಟನೆಯ ಬಗ್ಗೆ ಮಾಹಿತಿಗಾಗಿ ರೈಲ್ವೆ ಇಲಾಖೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆಗೊಳಿಸಿದ್ದು ಆ ಸಹಾಯವಾಣಿ ಸಂಖ್ಯೆ ಹೀಗಿದೆ- -  0183-2223171, 0183-2564485
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಹ ಸಾದ್ಯವಿರುವ ಎಲ್ಲಾ ನೆರವನ್ನು ಕೇಂದ್ರ ಸರ್ಕಾರ ನೀಡುವುದಾಗಿ ಹೇಳಿದ್ದಾರೆ.ಇದೇ ವೇಳೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಘಟನೆ ಸಂಬಂಧ ತನಿಖೆಗೆ ಆದೇಶಿಸಿರುವುದಲ್ಲದೆ ತಾವು ಅಪಘಾತದಲ್ಲಿ ಮಡಿದವರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ ಘೊಷಣೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com