ದೆಹಲಿ: ರಾಮಲೀಲಾ ಮೈದಾನದಲ್ಲಿ ದಸರಾ ಆಚರಣೆ : ರಾವಣನನ್ನು ದಹಿಸಿದ ಪ್ರಧಾನಿ

ಶರನವರಾತ್ರಿಯ 9 ನೇ ದಿನವಾದ ಇಂದು ವಿಜಯದಶಮಿಯನ್ನು ದೇಶಾದ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು.
ರಾವಣ ಪ್ರತಿಕೃತಿ ದಹಿಸುತ್ತಿರುವ  ಪ್ರಧಾನಿ ಚಿತ್ರ
ರಾವಣ ಪ್ರತಿಕೃತಿ ದಹಿಸುತ್ತಿರುವ ಪ್ರಧಾನಿ ಚಿತ್ರ

ದೆಹಲಿ :ಶರನವರಾತ್ರಿಯ 9 ನೇ  ದಿನವಾದ ಇಂದು ವಿಜಯದಶಮಿಯನ್ನು ದೇಶಾದ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು.

ದಸರಾ ಪ್ರಯುಕ್ತ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಧಾನಿ ನರೇಂದ್ರ ಮೋದಿ ಮತ್ತಿತರ ನಾಯಕರು ಭಾಗವಹಿಸಿದ್ದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ,  ಬೆಂಕಿಯ ಬಾಣಗಳಿಂದ ರಾವಣ ಪ್ರತಿಕೃತಿ ದಹಿಸಿದರು.
ಪಶ್ಚಿಮ ಭಾರತದಲ್ಲಿ ದುರ್ಗಾ ಪೂಜೆ ಅಂತಿಮ ದಿನವಾಗಿ ವಿಜಯದಶಮಿ ಆಚರಿಸಿದರೆ, ಉತ್ತರ ಭಾರತದಾದ್ಯಂತ ದಸರಾ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ವೇಳೆ ದುಷ್ಟ ಸಂಹಾರದ ಸಂಕೇತವಾಗಿ ರಾವಣ, ಕುಂಭಕರ್ಣ, ಪ್ರತಿಕೃತಿಗಳನ್ನು ನಿರ್ಮಿಸಿ ಅವುಗಳನ್ನು ದಹಿಸಲಾಗುತ್ತದೆ.
ಈ ಮಧ್ಯೆ ದುಷ್ಟ ಸಂಹಾರದ ಸಂಕೇತವಾಗಿ ಆಚರಿಸುವ ವಿಜಯದಶಮಿ ಸಮಾಜದಲ್ಲಿ ಶಾಂತಿ, ನೆಮ್ಮದಿ ಮೂಡಿಸಲಿ  ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್  ಶುಭ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com