ಮಂದಿರ ನಿರ್ಮಾಣ ಅಯೋಧ್ಯೆಯಲ್ಲಿ, ಹೈದರಾಬಾದ್, ಪಾಕ್, ಇರಾನ್ ನಲ್ಲಿ ಅಲ್ಲ: ಓವೈಸಿಗೆ ಶಿವಸೇನೆ

ರಾಮಮಂದಿರ ನಿರ್ಮಾಣದ ಸಂಬಂಧ ರಾಜಕೀಯ ಪಕ್ಷಗಳ ನಡುವಿನ ಹೇಳಿಕೆ ಪ್ರತಿಕ್ರಿಯೆಗಳ ಭರಾಟೆ ಹೆಚ್ಚುತ್ತಿದ್ದು, ಮಂದಿರ ನಿರ್ಮಾಣದ ಬಗ್ಗೆ ಹೇಳಿಕೆ ನೀಡಿದ್ದ ಅಸಾದುದ್ದೀನ್ ಓವೈಸಿಗೆ ಶಿವಸೇನೆ ಪ್ರತಿಕ್ರಿಯೆ ನೀಡಿದೆ.
ಸಂಜಯ್ ರೌತ್
ಸಂಜಯ್ ರೌತ್
ಮುಂಬೈ: ರಾಮಮಂದಿರ ನಿರ್ಮಾಣದ ಸಂಬಂಧ ರಾಜಕೀಯ ಪಕ್ಷಗಳ ನಡುವಿನ ಹೇಳಿಕೆ ಪ್ರತಿಕ್ರಿಯೆಗಳ ಭರಾಟೆ ಹೆಚ್ಚುತ್ತಿದ್ದು, ಮಂದಿರ ನಿರ್ಮಾಣದ ಬಗ್ಗೆ ಹೇಳಿಕೆ ನೀಡಿದ್ದ ಅಸಾದುದ್ದೀನ್ ಓವೈಸಿಗೆ ಶಿವಸೇನೆ ಪ್ರತಿಕ್ರಿಯೆ ನೀಡಿದೆ. 
ರಾಮ ಮಂದಿರ ನಿರ್ಮಾಣ ಮಾಡುತ್ತಿರುವ ಅಯೋಧ್ಯೆಯಲ್ಲಿಯೇ ಹೊರತು ಹೈದರಾಬಾದ್, ಪಾಕಿಸ್ತಾನ ಅಥವಾ ಇರಾನ್ ನಲ್ಲಿ ಅಲ್ಲ, ಓವೈಸಿಯಂತಹ ರಾಜಕಾರಣಿಗಳು ಮುಸ್ಲಿಂ ಸಮುದಾಯವನ್ನು ತಪ್ಪು ದಾರಿಗೆ ಎಳೆಯುತ್ತಿದ್ದು,ಭವಿಷ್ಯದಲ್ಲಿ ಇದು ಅಪಾರ ಪ್ರಮಾಣದ ಹಾನಿಗೆ ಕಾರಣವಾಗುತ್ತದೆ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ. 
ರಾಮಮಂದಿರ ನಿರ್ಮಾಣಕ್ಕೆ ಕಾನೂನು ಜಾರಿಗೊಳಿಸಬೇಕು. ಕಾನೂನು ಜಾರಿಯಾಗದೇ ರಾಮಮಂದಿರ ನಿರ್ಮಾಣ ಸಾಧ್ಯವಿಲ್ಲ. 2019 ರ ಚುನವಾಣೆ ಫಲಿತಾಂಶದ ಬಗ್ಗೆ ಸ್ಪಷ್ಟತೆ ಇಲ್ಲ. ಬಹುಮತವಿದ್ದಾಗಲೇ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು, ರಾಮಮಂದಿರ ವಿವಾದ ಕೋರ್ಟ್ ನಲ್ಲಿ ಬಗೆಹರಿಯುವುದಲ್ಲ. ಇದು ರಾಜಕೀಯ ಇಚ್ಛಾಶಕ್ತಿಗೆ ಸಂಬಂಧಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಇದನ್ನು ಮಾಡಬಲ್ಲರು  ಎಂದು ಸಂಜಯ್ ರಾವುತ್ ಹೇಳಿದ್ದಾರೆ.
ರಾಮಮಂದಿರ ವಿಷಯದ ಬಗ್ಗೆ ಅಸಾದುದ್ದೀನ್ ಓವೈಸಿ ಮಾತನಾಡುವಂತಿಲ್ಲ. ಅಸಾದುದ್ದೀನ್ ಓವೈಸಿ ಹೈದರಾಬಾದ್ ಗೆ ಸೀಮಿತವಾಗಿರಬೇಕು. ರಾಮಮಂದಿರ ನಿರ್ಮಾಣ ಮಾಡುತ್ತಿರುವುದು ಹೈದರಾಬಾದ್ ನಲ್ಲಿ ಪಾಕಿಸ್ತಾನದಲ್ಲಿ ಅಥವಾ ಇರಾನ್ ನಲ್ಲಿ ನಿರ್ಮಿಸುತ್ತಿಲ್ಲ ಅಯೋಧ್ಯೆಯಲ್ಲಿ ನಿರ್ಮಿಸುತ್ತಿದ್ದೆವೆ ಎಂದು ರಾವುತ್ ತಿಳಿಸಿದ್ದಾರೆ. 
ವಿಜಯದಶಮಿಯಂದು ಭಾಷಣ ಮಾಡಿದ್ದ ಮೋಹನ್ ಭಾಗ್ವತ್, ರಾಮಂದಿರ ನಿರ್ಮಾಣಕ್ಕೆ ಕಾನೂನು ಜಾರಿಗೊಳಿಸಬೇಕು, ದೇಶದ ಆತ್ಮಗೌರವಕ್ಕಾಗಿ ರಾಮಮಂದಿರ ನಿರ್ಮಾಣ ಅನಿವಾರ್ಯ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಓವೈಸಿ ರಾಮಮಂದಿರ ಕಟ್ಟದಂತೆ ನಿಮ್ಮನ್ನು ತಡೆಯುತ್ತಿರುವುದಾದರೂ ಯಾರು ಎಂದು ಪ್ರಶ್ನಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com