ಛತ್ತೀಸ್ ಗಡ :ಮೂವರು ನಕ್ಸಲೀಯರನ್ನು ಹತ್ಯೆಗೈದ ಭದ್ರತಾ ಪಡೆಗಳು !

ಛತ್ತೀಸ್ ಗಡದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರನ್ನು ನಕ್ಸಲೀಯರನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಪುರ: ಛತ್ತೀಸ್ ಗಡದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರನ್ನು ನಕ್ಸಲೀಯರನ್ನು ಹತ್ಯೆಗೈಯಲಾಗಿದೆ  ಎಂದು ಪೊಲೀಸರು ತಿಳಿಸಿದ್ದಾರೆ.

ಮಿರ್ತೂರು ಠಾಣೆ ವ್ಯಾಪ್ತಿಯ ಮಾದಪಾಲ್ ಗ್ರಾಮದ ಬಳಿ ಇಂದು ಬೆಳ್ಳಿಗೆ 9-30 ರ ಸುಮಾರಿನಲ್ಲಿ ಜಿಲ್ಲಾ ಮೀಸಲು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂವರು ನಕ್ಸಲೀಯರನ್ನು ಹತ್ಯೆಗೈದಿದ್ದಾರೆ ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಮೊಹಿತ್ ಗಾರ್ಗ್ ತಿಳಿಸಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಡ್ಡಿಯುಂಟು ಮಾಡಲು ಕಾರ್ಯತಂತ್ರ ರೂಪಿಸುತ್ತಿದ್ದ ನಕ್ಸಲೀಯರ ಗುಂಪಿನ ಬಗ್ಗೆ ಮಾಹಿತಿ ಪಡೆದಿದ್ದು,  ಈ ಪ್ರದೇಶದಲ್ಲಿ ಡಿಆರ್ ಜಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಎನ್ ಕೌಂಟರ್ ಬಳಿಕ ಮೂವರು ನಕ್ಸಲೀಯರ ಮೃತದೇಹದೊಂದಿಗೆ  ಒಂದು 303 ರೈಪಲ್ ಮತ್ತು ಎರಡು ತುಂಬಿದ ಗನ್ ಗಳು ಸ್ಥಳದಲ್ಲಿ ಕಂಡುಬಂದಿವೆ.  ಇದಲ್ಲದೇ ಸ್ಥಳದಲ್ಲಿದ್ದ ಕೆಲ ಸ್ಪೋಟಕ ಸಲಕರಣೆಗಳು , ನಕ್ಸಲ್ ಸಾಹಿತ್ಯ, ಕಾಗದ ಪತ್ರಗಳನ್ನು  ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ

ಘಟನೆಯಲ್ಲಿ ಐವರು ನಕ್ಸಲೀಯರು ಗಾಯಗೊಂಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಆದರೆ. ಅವರನ್ನು ಅರಣ್ಯ ಪ್ರದೇಶದಿಂದ  ಕರೆದುಕೊಂಡು ಹೋಗುವಲ್ಲಿ ಸಹೋದ್ಯೋಗಿಗಳು ಯಶಸ್ವಿಯಾಗಿದ್ದಾರೆ . ಅವರು ತಂಗಿದ ಸ್ಥಳದಲ್ಲಿ ಗೆಲೆಟಿನ್ ಕಡ್ಡಿಗಳು, ಗನ್ ಪೌಡರ್, 200 ಮೆಟ್ರಿಕ್ ಗೂ ಹೆಚ್ಚು ಬಂಡಲ್ ಗಳ ವಿದ್ಯುತ್ ತಂತಿ , ಶಸಾಸ್ತ್ರ ದುರಸ್ಥಿಗೊಳಿಸುವ ಮೆಷಿನ್ ಕೂಡಾ  ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಿಜಾಪುರ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ನವೆಂಬರ್ 12 ರಂದು ನಕ್ಸಲ್ ಪೀಡಿತ ಏಂಟು ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com