ನೇತಾಜಿ ಸುಭಾಷ್ ಪರಂಪರೆ ಮೇಲೆ ಹಕ್ಕು ಪ್ರತಿಪಾದನೆ: ಮೋದಿ ಬಗ್ಗೆ ಕಾಂಗ್ರೆಸ್ ಗೇಲಿ

ಮೋದಿ ನೇತಾಜಿ ಹಾಗೂ ಸರ್ದಾರ್ ಪಟೇಲ್ ಅವರನ್ನು ರಾಜಕೀಯಕ್ಕೆ ಎಳೆತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನೇತಾಜಿ ಸುಭಾಷ್ ಪರಂಪರೆ ಮೇಲೆ ಹಕ್ಕು ಪ್ರತಿಪಾದನೆ: ಮೋದಿ ಬಗ್ಗೆ ಕಾಂಗ್ರೆಸ್ ಗೇಲಿ
ನೇತಾಜಿ ಸುಭಾಷ್ ಪರಂಪರೆ ಮೇಲೆ ಹಕ್ಕು ಪ್ರತಿಪಾದನೆ: ಮೋದಿ ಬಗ್ಗೆ ಕಾಂಗ್ರೆಸ್ ಗೇಲಿ
ನವದೆಹಲಿ: ಸುಭಾಷ್ ಚಂದ್ರ ಬೋಸ್ ಅವರು ಸ್ಥಾಪಿಸಿದ್ದ ಆಝಾದ್ ಹಿಂದ್ ಫೌಜ್ ಅಥವಾ ಐಎನ್ಎಯ 75 ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಭಾಷಣ ಮಾಡಿದ್ದರು. ತಮ್ಮ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ  ವಾಗ್ದಾಳಿ ನಡೆಸಿದ್ದ ಮೋದಿ ಕಾಂಗ್ರೆಸ್ ಪಕ್ಷ ತನ್ನ ಆಡಳಿತಾವಧಿಯಲ್ಲಿ ದೇಶಕ್ಕಾಗಿ ಕೊಡುಗೆ ನೀಡಿದವರನ್ನು ಮರೆತಿದೆ ಎಂದಿದ್ದರು. 
ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಪ್ರತಿಕ್ರಿಯೆ ನೀಡಿದ್ದು, ಮೋದಿ ನೇತಾಜಿ ಹಾಗೂ ಸರ್ದಾರ್ ಪಟೇಲ್ ಅವರನ್ನು ರಾಜಕೀಯಕ್ಕೆ ಎಳೆತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ 24X7 ರಾಜಕೀಯದ ಬಗ್ಗೆಯೇ ಯೋಚನೆ ಮಾಡುತ್ತಿರುತ್ತಾರೆ.  ಹತಾಶೆಗೊಳಗಾಗಿರುವ ಮೋದಿ ನೇತಾಜಿ ಹಾಗೂ ಸ್ವಾತಂತ್ರ್ಯ ಚಳುವಳಿಯ ಮೇಲೆ ಹಕ್ಕು ಪ್ರತಿಪಾದನೆಗೆ ಮುಂದಾಗಿದ್ದಾರೆ ಎಂದು ಸಿಂಘ್ವಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com