ಅಮೃತಸರ ರೈಲು ಅಪಘಾತ
ಅಮೃತಸರ ರೈಲು ಅಪಘಾತ

ಅಮೃತಸರ್ ರೈಲು ದುರಂತವನ್ನು ಜಲಿಯನ್ ವಾಲಾಭಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಶಿವಸೇನೆ!

ಕಳೆದ ವಾರ ಸಂಭವಿಸಿದ ಅಮೃತಸರ್ ರೈಲು ದುರಂತವನ್ನು 1919ರ ಜಲಿಯನ್ ವಾಲಾ ಭಾಗ್ ದುರಂತದೊಡನೆ ಹೋಲಿಸಿ ಶಿವಸೇನೆ ಹೇಳಿಕೆ ನಿಡಿದೆ.
ಮುಂಬೈ: ಕಳೆದ ವಾರ ಸಂಭವಿಸಿದ ಅಮೃತಸರ್ ರೈಲು ದುರಂತವನ್ನು 1919ರ ಜಲಿಯನ್ ವಾಲಾಭಾಗ್ ದುರಂತದೊಡನೆ ಹೋಲಿಸಿ ಶಿವಸೇನೆ ಹೇಳಿಕೆ ನಿಡಿದೆ.
"ಜಲಿಯನ್ ವಾಲಾಭಾಗ್ ಹತ್ಯಾಕಾಂಡವನ್ನು ನೆನಪಿಸುವ ಒಂದು ಘಟನೆ ಇತ್ತೀಚೆಗೆ ಪಂಜಾಬ್ ನಲ್ಲಿ ನಡೆದಿದೆ. ಜಲಿಯನ್ ವಾಲಾ ಭಾಗ್ ಘಟನೆ ಬ್ರಿಟೀಷ್ ಭಾರತದಲ್ಲಿ ನಡೆದಿತ್ತು. ಆದರೆ , ಅಮೃತಸರ ದುರಂತವು ಸ್ವತಂತ್ರ ಭಾರತದಲ್ಲಿ ನಡೆಯಿತು.ಇದು ಜನರು ಕ್ರಿಮಿಗಳಂತೆ ಸಾಯುವದನ್ನು ಮತ್ತೊಮ್ಮೆ ನಮ್ಮೆದುರು ತೋರಿಸಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ದಲ್ಲಿ ಹೇಳಿದೆ.
ಇದೇ ಅಕ್ಟೋಬರ್ 19ರಂದು ವಿಜಯದಶಮಿ ದಿನದಂದು ಪಂಜಾಬ್ ನ ಅಮೃತಸರ್ ನಲ್ಲಿ ರಾವಣನ ಪ್ರತಿಕೃತಿ ದಹನ ನಡೆಸಿದ್ದ ಜನರ ಮೇಲೆ ರೈಲು ಹರಿದು ೬೧ ಜನ ಸಾವಿಗೀಡಾಗಿದ್ದರು. ಇದೇ ನಗರದಲ್ಲಿ ಏಪ್ರಿಲ್ 13, 1919ರಂದು ಜನರಲ್ ಡಯರ್ ಕಾರಣದಿಂದ ಜಲಿಯನ್ ವಾಲಾ ಭಾಗ್ ಹತ್ಯಾಂಕಾಂಡ ನಡೆದಿತ್ತು.
ರೈಲ್ವೇ ಮೂಲಭೂತ ಸೌಕರ್ಯ ಮತ್ತು ಕಾರ್ಯಚಟುವಟಿಕೆಯಲ್ಲಿನ ಲೋಪದ ಕುರಿತಂತೆ ಟೀಕಿಸಿರುವ ಶಿವಸೇನೆ ಕೇಂದ್ರದ ಬಿಜೆಪಿ ಹಾಗೂ ಪಂಜಾಬ್ ನ ಕಾಂಗ್ರೆಸ್ ಸರ್ಕಾರವನ್ನು ಲೇವಡಿ ಮಾಡಿದೆ. ಅಲ್ಲದೆ ಇದೇ ವೇಳೆ ಕೇಂದ್ರದ ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆ ಬಗ್ಗೆ ಸಹ ಕಿಡಿ ಕಾರಿದೆ.
"ನೂರಾರು ಜನರು ರೈಲು ಅಪಘಾತಗಳಲ್ಲಿ ಸತ್ತು ಹೋಗುತ್ತಿದ್ದಾರೆ. ಒಂದು ಕಡೆ ಜನ ಸಾಯುತ್ತಿದ್ದರೆ ಇನ್ನೊಂದೆಡೆ ರೈಲ್ವೆ ಸಚಿವರು ಬದಲಾಗುತ್ತಿದ್ದಾರೆ. ಇದೊಂದು ಸಂಪ್ರದಾಯವಾಗಿ ಹೋಗಿದೆ. ಸುರೇಶ್ ಪ್ರಭು ಇದ್ದ ಸ್ಥಾನಕ್ಕೆ ಯುಶ್ ಗೋಯಲ್ ಬಂದಿದ್ದಾರೆ.ಇನ್ನು ರೈಲ್ವೆಗೆ ಸ್ವತಂತ್ರ ಭಾರತದಲ್ಲಿ ಜಾರಿಯಲ್ಲಿದ್ದ ಪ್ರತ್ಯೇಕ ಬಜೆಟ್ ಅನ್ನು ಸಹ ಮೋದಿ ಸರ್ಕಾರ ತೆಗೆದು ಹಾಕಿದೆ" ಶಿವಸೇನೆ ಹೇಳಿದೆ.

Related Stories

No stories found.

Advertisement

X
Kannada Prabha
www.kannadaprabha.com