ಮೂರು ಬಾರಿ ಸಿಎಂ ಆಗಿರುವ ರಮಣ್ ಸಿಂಗ್ ಅವರು ರಾಜಕೀಯ ಅನುಭವದಲ್ಲೂ ಹಿರಿಯರು. 1970ರ ಆರಂಭದಲ್ಲಿ ರಮಣ್ ಸಿಂಗ್ ಜನಸಂಘಕ್ಕೆ ಸೇರಿದವರು, 1976-77ರಲ್ಲಿ ಜನಸಂಘದ ಯುವ ಘಟಕಕ್ಕೆ ಅಧ್ಯಕ್ಷರಾಗಿದ್ದರು. ಇನ್ನು ಯೋಗಿ ಆದಿತ್ಯನಾಥ್ 1972ರಲ್ಲಿ ಜನಿಸಿದವರು. ಆದರೆ ಅವರು ಗೋರಖ್ಪುರ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಿದ ಸನ್ಯಾಸಿಯಾಗಿದ್ದಾರೆ. ಸನ್ಯಾಸಿಯಾಗಿರುವ ಯೋಗಿ ಆದಿತ್ಯನಾಥರ ಪಾದಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹ ತಾವು ಪ್ರಮಾಣವಚನ ಸಮಾರಂಭದ ವೇಳೆ ನಮಸ್ಕರಿಸಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.