
ನವದೆಹಲಿ:ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿಸಲಾಗುತ್ತಿರುವ ಪಂಚ ರಾಜ್ಯಗಳ ಚುನಾವಣಾ ಕಣ ದಿನದಿಂದ ದಿನಕ್ಕೆ ಕುತೂಹಲವನ್ನು ಕೆರಳಿಸುತ್ತಿದ್ದು, ಛತ್ತೀಸ್ ಗಡದ ಮುಖ್ಯಮಂತ್ರಿ ಡಾ. ರಮಣ್ ಸಿಂಗ್ ವಿರುದ್ಧ ಮಾಜಿ ಪ್ರದಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರಿಯ ಮಗಳು ಕರುಣಾ ಶುಕ್ಲಾ ಸ್ಪರ್ಧಿಸುತ್ತಿದ್ದಾರೆ.
32 ವರ್ಷ ಬಿಜೆಪಿ ಪಕ್ಷದಲ್ಲಿಯೇ ಇದ್ದ ಕರುಣಾ ಶುಕ್ಲಾ , ಕೆಲ ವರ್ಷಗಳಿಂದ ಬಿಜೆಪಿ ತೊರೆದಿದ್ದು, ಈಗ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಡಾ. ರಮಣ್ ಸಿಂಗ್ ಸ್ಪರ್ಧಿಸಲಿರುವ ರಾಜ್ ನಂದ್ಗಾನ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಕರುಣಾ ಶುಕ್ಲಾ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲ್ ಕೃಷ್ಣ ಅಡ್ವಾಣಿಯಿಂದ ಸ್ಥಾಪನೆಯಾಗಿದ್ದ ಬಿಜೆಪಿ ತನ್ನ ಮೌಲ್ಯಗಳು ಹಾಗೂ ಸಂಸ್ಕೃತಿಯನ್ನು ಕಳೆದುಕೊಂಡಿದೆ ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ 32 ವರ್ಷ ಪಕ್ಷದಲ್ಲಿದ್ದ ತಾವೂ ಕೆಲ ವರ್ಷಗಳಿಂದ ಬಿಜೆಪಿಯೊಂದಿಗಿನ ಸಂಪರ್ಕ ಕಳೆದುಕೊಂಡಿದ್ದಾಗಿ ಹೇಳಿದ್ದಾರೆ
15 ವರ್ಷಗಳಿಂದಲೂ ಛತ್ತೀಸ್ ಗಡದ ಮುಖ್ಯಮಂತ್ರಿಯಾಗಿರುವ ಹಾಗೂ 10 ವರ್ಷಗಳಿಂದಲೂ ರಾಜ್ ನಂದ್ಗಾನ್ ಶಾಸಕರಾಗಿರುವ ಡಾ. ರಣಮ್ ಸಿಂಗ್, ಜನರ ಒಳಿತಿಗಾಗಿ ಏನೂ ಮಾಡಿಲ್ಲ. ಅದಕ್ಕಾಗಿ ಜನರ ಒಳಿತಿಗಾಗಿ ಹೋರಾಡುವಂತೆ ತಮ್ಮನ್ನು ಕಾಂಗ್ರೆಸ್ ಅಧ್ಯಕ್ಷರು ಕಳುಹಿಸಿರುವುದಾಗಿ ಕರುಣ ಶುಕ್ಲಾ ತಿಳಿಸಿದ್ದಾರೆ.
ನವೆಂಬರ್ 12 ರಂದು ಛತ್ತೀಸ್ ಗಡ ವಿಧಾನಸಭೆಯ ಮೊದಲ ಹಂತದ ಚುನಾವಣೆ ನಡೆಯಲಿದೆ.
Advertisement