ಪ್ರಧಾನಿ ಮೋದಿ 'ನಮಕ್‌ ಹರಾಮ್‌ ' ಎಂದ ಜಿಗ್ನೇಶ್‌ ಮೇವಾನಿ

ದಲಿತ ನಾಯಕ ಹಾಗೂ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಪ್ರಧಾನಿ ನರೇಂದ್ರ ಮೋದಿ ಅವರನ್ನು...
ಜಿಗ್ನೇಶ್‌ ಮೇವಾನಿ
ಜಿಗ್ನೇಶ್‌ ಮೇವಾನಿ
ನವದೆಹಲಿ: ದಲಿತ ನಾಯಕ ಹಾಗೂ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಪ್ರಧಾನಿ ನರೇಂದ್ರ ಮೋದಿ ಅವರನ್ನು "ನಮಕ್‌ ಹರಾಮ್‌'' ಎಂದು ಕರೆಯುವ ಮೂಲಕ ಅವಮಾನಿಸಿದ್ದಾರೆ.
ಪಾಟ್ನಾದ ರಾಲಿಯೊಂದರಲ್ಲಿ ಮಾತನಾಡಿದ ಮೇವಾನಿ, ಇತ್ತೀಚಿಗೆ ಹೊರ ರಾಜ್ಯಗಳಿಂದ ಗುಜರಾತ್ ಗೆ ವಲಸೆ ಬರುತ್ತಿರುವ ಕಾರ್ಮಿಕರ ಮೇಲಿನ ದೌರ್ಜನ್ಯದ ಬಗ್ಗೆ ಮೋದಿಯ ಜಾಣ ಮೌನವನ್ನು ಖಂಡಿಸುವ ಭರದಲ್ಲಿ ಪ್ರಧಾನಿ ಮೋದಿಯನ್ನು "ನಮಕ್‌ ಹರಾಮ್‌'' (ಅಪ್ರಾಮಾಣಿಕ) ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗುಜರಾತ್‌ನ ಅಹ್ಮದಾಬಾದ್‌, ಸೂರತ್‌, ರಾಜ್‌ಕೋಟ್‌ ಮತ್ತು ಬರೋಡದಲ್ಲಿ ರಸ್ತೆ, ಸೇತುವೆ, ಫ್ಲೈ ಓವರ್‌ಗಳನ್ನು ನಿರ್ಮಿಸುವ ಕೆಲಸಕ್ಕಾಗಿ ಮಧ್ಯ ಪ್ರದೇಶ, ಜಾರ್ಖಂಡ್‌, ಯುಪಿ ಮತ್ತು ಬಿಹಾರದಿಂದ ಅಪಾರ ಸಂಖ್ಯೆಯ ಕಾರ್ಮಿಕರು ವಲಸೆ ಬರುತ್ತಾರೆ. ಈಚೆಗೆ ಸುಮಾರ 12ರಿಂದ 15 ದಿನಗಳ ಕಾಲ ಈ ವಲಸೆ ಕಾರ್ಮಿಕರ ಮೇಲೆ ದೌರ್ಜನ್ಯ ನಡೆದಿದೆ. ಆದರೆ  ಈ ಬಗ್ಗೆ  ಈ "ನಮಕ್‌ ಹರಾಮ್‌''  ಚಕಾರವನ್ನೂ ಎತ್ತಿಲ್ಲ ಎಂದು ಮೇವಾನಿ ಹೇಳಿದರು. 
ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ  "ಬಿಜೆಪಿ ಹಠಾವೋ ದೇಶ್‌ ಬಚಾವೋ' ಕಾರ್ಯಕ್ರಮದಲ್ಲಿ ಮೇವಾನಿ ಒಟ್ಟು 9 ನಿಮಿಷಗಳ ಕಾಲ ಭಾಷಣ ಮಾಡಿದ್ದು, ಈ ವೇಳೆ  "ಶೇಮ್‌ ಆನ್‌ ಯೂ ನರೇಂದ್ರ ಮೋದಿ, ಶೇಮ್‌ ಆನ್‌ ಯೂ'' ಎಂದು ಕನಿಷ್ಠ ಆರು ಬಾರಿ ಕೂಗಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com