ಬಂಧಿತ ಸಾಮಾಜಿಕ ಕಾರ್ಯಕರ್ತರು
ಬಂಧಿತ ಸಾಮಾಜಿಕ ಕಾರ್ಯಕರ್ತರು

ಭೀಮಾ ಕೋರೆಗಾಂವ್ ಪ್ರಕರಣ: ವೆರ್ನೊನ್‌ ಗೊನ್ಸಾಲ್ವೆಸ್‌, ಅರುಣ್‌ ಫೆರೇರಾ ಪೊಲೀಸ್ ವಶಕ್ಕೆ

ಭೀಮಾ ಕೋರೆಗಾಂವ್‌ ಹಿಂಸಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸಾಮಾಜಿಕ ಕಾರ್ಯಕರ್ತರಾದ...
ಪುಣೆ: ಭೀಮಾ ಕೋರೆಗಾಂವ್‌ ಹಿಂಸಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸಾಮಾಜಿಕ ಕಾರ್ಯಕರ್ತರಾದ ಅರುಣ್‌ ಫೆರೇರಾ ಹಾಗೂ ವೆರ್ನೊನ್‌ ಗೊನ್ಸಾಲ್ವೆಸ್‌ ಅವರನ್ನು ಪುಣೆ ಕೋರ್ಟ್ ನವೆಂಬರ್ 6ರವರೆಗೆ ಪೊಲೀಸ್ ವಶಕ್ಕೆ ನೀಡಿದೆ.
ಅರುಣ್‌ ಫೆರೇರಾ ಹಾಗೂ ವೆರ್ನೊನ್‌ ಗೊನ್ಸಾಲ್ವೆಸ್‌ ಅವರ ಗೃಹ ಬಂಧನ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಪುಣೆ ಸೆಷನ್ಸ್ ಕೋರ್ಟ್ ಗೆ ಆರೋಪಿಗಳನ್ನು ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ತನಿಖೆಗಾಗಿ ಸಾಮಾಜಿಕ ಕಾರ್ಯಕರ್ತರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ನಿನ್ನೆಯಷ್ಟೇ ಅರುಣ್‌ ಫೆರೇರಾ ಹಾಗೂ ವೆರ್ನೊನ್‌ ಗೊನ್ಸಾಲ್ವೆಸ್‌ ಅವರ ಜಾಮೀನು ಅರ್ಜಿಯನ್ನು ಪುಣೆ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು.
ಭೀಮಾ ಕೋರೆಗಾಂವ್‌ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕಳೆದ ಆಗಸ್ಟ್ 28ರಂದು ಕವಿ ವರವರ ರಾವ್ ಸೇರಿದಂತೆ ಗೌತಮ್ ನವಲಖಾ, ಅರುಣ್ ಫೆರೇರಾ, ವೆರ್ನೊನ್ ಗೊನ್ಸಾಲ್ವೆಸ್, ಸುಧಾ ಭಾರದ್ವಾಜ್ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದರು. ಗೌತಮ್ ನವಲಖಾ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದು, ಕವಿ ವರವರರಾವ್ ಅವರ ಗೃಹ ಬಂಧನ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಈ ಮಧ್ಯೆ ಸಾಮಾಜಿಕ ಕಾರ್ಯಕರ್ತರ ವಿರುದ್ಧದ ಎಸ್ಐಟಿ ತನಿಖೆ ವಿರುದ್ಧ ಇತಿಹಾಸಕಾರ ರೋಮಿಲಾ ಥಾಪರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದ್ದು, ಮಹಾರಾಷ್ಟ್ರ ಪೊಲೀಸರು ತನಿಖೆ ಮುಂದುವರೆಸಲು ಅನುಮತಿ ನೀಡಿದೆ.

Related Stories

No stories found.

Advertisement

X
Kannada Prabha
www.kannadaprabha.com