ರಾಫೆಲ್ ಒಪ್ಪಂದ ತನಿಖೆ ತಡೆಗಾಗಿ ಸಿಬಿಐ ನಿರ್ದೇಶಕರಿಗೆ ಕಡ್ಡಾಯ ರಜೆ-ಭೂಷಣ್

ಬಹು ಬಿಲಿಯನ್ ಡಾಲರ್ ಮೊತ್ತದ ರಾಫೆಲ್ ಒಪ್ಪಂದ ಕುರಿತು ತನಿಖೆ ತಡೆಯಲು ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಸುಪ್ರೀಂಕೋರ್ಟ್ ಹಿರಿಯ ವಕೀಲ ಹಾಗೂ ಹೋರಾಟಗಾರ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಪ್ರಶಾಂತ್ ಭೂಷಣ್
ಪ್ರಶಾಂತ್ ಭೂಷಣ್

ನವದೆಹಲಿ:  ಬಹು ಬಿಲಿಯನ್ ಡಾಲರ್ ಮೊತ್ತದ ರಾಫೆಲ್ ಒಪ್ಪಂದ ಕುರಿತು ತನಿಖೆ ತಡೆಯಲು ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು  ಸುಪ್ರೀಂಕೋರ್ಟ್  ಹಿರಿಯ ವಕೀಲ ಹಾಗೂ ಹೋರಾಟಗಾರ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ಎರಡು ವಾರಗಳೊಳಗೆ ತನಿಖೆ ಪೂರ್ಣಗೊಳಿಸುವಂತೆ ಕೇಂದ್ರ ಜಾಗೃತ ಆಯೋಗಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವುದನ್ನು ಪ್ರಶಾಂತ್ ಭೂಷಣ್ ಸ್ವಾಗತಿಸಿದ್ದಾರೆ.

ರಾಫೆಲ್ ಒಪ್ಪಂದ ಕುರಿತ ತನಿಖೆಯ ಸಂಬಂಧ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ವರ್ಮಾ ಅವರನ್ನು ಸರ್ಕಾರ  ಕಡ್ಡಾಯವಾಗಿ ರಜೆ ಮೇಲೆ ಕಳುಹಿಸಿದೆ ಎಂದು ಅವರು ಹೇಳಿದ್ದಾರೆ.

ರಾಫೆಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಮಾಜಿ ಸಚಿವ ಯಶವಂತ್ ಸಿಂಗ್, ಹಿರಿಯ ಪತ್ರಕರ್ತ ಅರುಣ್ ಶೌರಿ ಜೊತೆಯಲ್ಲಿ ಪ್ರಶಾಂತ್ ಭೂಷಣ್  ಸಿಬಿಐಗೆ ದೂರು ಸಲ್ಲಿಸಿದ್ದರು.

ರಾಫೆಲ್ ಒಪ್ಪಂದ ತನಿಖೆ ಹಿನ್ನೆಲೆಯಲ್ಲಿ ವರ್ಮಾ ಅವರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಭೀತಿಗೊಂಡಂತಾದ ಸರ್ಕಾರ ಇನ್ನೂ ಅವಧಿ ಮುಗಿಯದಿದ್ದರೂ ವರ್ಮಾ ಅವರನ್ನು  ತೆಗೆಯಲಾಗಿದೆ ಎಂದು ಆರೋಪಿಸಿದ ಪ್ರಶಾಂತ್ ಭೂಷಣ್, ರಾಫೆಲ್ ಒಪ್ಪಂದ ಸಂಬಂಧ  ಜಂಟಿ ಸಂಸದೀಯ ಸಮಿತಿ ಅಥವಾ ಸಿಬಿಐ ತನಿಖೆ ಅಥವಾ ಸಿಎಜಿ ಆಡಿಟ್ ಗೆ ಆದೇಶ ಕೇಂದ್ರ ಸರ್ಕಾರ ಏಕೆ ಆದೇಶ ಹೊರಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಹಾಗೂ  ವರ್ಮಾ ಮೇಲಿನ ಭ್ರಷ್ಟಾಚಾರ ಆರೋಪ ಕುರಿತಂತೆ 14 ದಿನಗಳಲ್ಲಿ  ಸುಪ್ರೀಂಕೋರ್ಟ್ ನಿವೃತ್ತ ಹಿರಿಯ ನ್ಯಾಯಾಧೀಶ ಎ.ಕೆ. ಪಾಟ್ನಾಯಕ್ ಮೇಲ್ವಿಚಾರಣೆಯಲ್ಲಿ ವಿಚಾರಣೆ ನಡೆಸುತ್ತಿರುವುದು ಉತ್ತಮ ಕ್ರಮವಾಗಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com