ನವದೆಹಲಿ: ಐಆರ್ ಎಸ್ ಅಧಿಕಾರಿ ಸಂಜಯ್ ಕುಮಾರ್ ಮಿಶ್ರಾ ಜಾರಿ ನಿರ್ದೇಶನಾಲಯದ ಮುಖ್ಯಸ್ಥರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ,
ಸಂಜಯ್ ಮಿಶ್ರಾ ಅವರು 1984ರ ಬ್ಯಾಚ್ನ ಐಆರ್ಎಸ್ ಅಧಿಕಾರಿಯಾಗಿದ್ದಾರೆ., ಏಜೆನ್ಸಿಯ ಪ್ರಧಾನ ವಿಷೇಷ ನಿರ್ದೇಶಕರಾಗಿ ನೇಮಕವಾಗಿದ್ದರು, ಸದ್ಯ ಮೂರು ತಿಂಗಳ ಅವಧಿಗೆ ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ಹೆಚ್ಚುವರಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ,
ಕರ್ನಲ್ ಸಿಂಗ್ ಅವರಿಂದ ಮಿಶ್ರಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ, ಭಾನುವಾರ ಕರ್ನಲ್ ಸಿಂಗ್ ಅಧಿಕಾರ ಅಂತ್ಯಗೊಳ್ಳಲಿದೆ.ಸದ್ಯ ಮಿಶ್ರಾ ಆದಾಯ ತೆರಿಗೆ ಇಲಾಖೆ ಯ ಆಯುಕ್ತರಾಗಿದ್ದಾರೆ, ಅವರ ಸಾಮರ್ಥ್ಯ ಗಮನಿಸಿ ಸರ್ಕಾರ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿದೆ ಎಂದು ಮೂಲಗಳು ತಿಳಿಸಿವೆ.