ಬೆಂಗಳೂರಿನ ಸಾಹಿತ್ಯ ಉತ್ಸವದಲ್ಲಿ ' ಭಾನುವಾರ ತನ್ನ ಪುಸ್ತಕ 'The Paradoxical Prime Minister" ದ ಕುರಿತು ಮಾತನಾಡಿದ್ದ ಶಶಿ ತರೂರ್ ಮೋದಿ ಅವರು ಆರ್ ಎಸ್ಎಸ್ ಪಾಲಿಗೆ ನುಂಗಲಾರದ ತುತ್ತಾಗಿದ್ದಾರೆ ಎಂಬುದನ್ನು ಹೇಳುವ ಭರದಲ್ಲಿ "ಆರ್ ಎಸ್ ಎಸ್ ಪಾಲಿಗೆ ಮೋದಿ ಶಿವಲಿಂಗದ ಮೇಲೆ ಕುಳಿತಿರುವ ಚೇಳಿನಂತಾಗಿದ್ದಾರೆ. ನೀವು ಅದನ್ನು ನಿಮ್ಮ ಕೈಯಿಂದ ತೆಗೆದು ಹಾಕಲೂ ಆಗುವುದಿಲ್ಲ, ಚಪ್ಪಲಿಯಿಂದ ಹೊಡೆಯುವುದಕ್ಕೂ ಆಗುವುದಿಲ್ಲ ಎಂದು ಹೇಳಿದ್ದರು.