ಹೋರಾಟಗಾರ ರಾಹುಲ್ ಈಶ್ವರ್ ಗೂ ತಟ್ಟಿದ ' ಮೀ ಟೂ ' ಬಿಸಿ: ಆರೋಪ ನಿರಾಕರಣೆ

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹೋರಾಟಗಾರ ರಾಹುಲ್ ಈಶ್ವರ್ ಗೂ #ಮೀಟೂ ಬಿಸಿ ತಟ್ಟಿದೆ.
ರಾಹುಲ್ ಈಶ್ವರ್
ರಾಹುಲ್ ಈಶ್ವರ್

ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹೋರಾಟಗಾರ ರಾಹುಲ್ ಈಶ್ವರ್ ಗೂ  #ಮೀಟೂ ಬಿಸಿ ತಟ್ಟಿದೆ.

 15 ವರ್ಷಗಳ ಹಿಂದೆ ರಾಹುಲ್ ಈಶ್ವರ್ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮಹಿಳೆಯರೊಬ್ಬರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಅವರು ನಿರಾಕರಿಸಿದ್ದು, ಇದು ರಾಜಕೀಯ ಪ್ರೇರಿತವಾಗದೆ ಎಂದಿದ್ದಾರೆ. ಇಂತಹ ಸುಳ್ಳು ಆರೋಪಗಳು #ಮೀಟೂ ಅಭಿಯಾನದ ವಿಶ್ವಾಸಾರ್ಹತೆಯನ್ನು ಹಾಳು ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇಂಜಿ ಪೆನ್ನು ಎಂಬ ಶೀರ್ಷಿಕೆಯಲ್ಲಿ ಫೇಸ್ ಬುಕ್ ನಲ್ಲಿ  ತನ್ನ ಅನುಭವ ಹಂಚಿಕೊಂಡಿರುವ ಮಹಿಳೆಯನ್ನು ಹೆಸರಾಂತ ಕಲಾವಿದೆ ಎಂದು ಗುರುತಿಸಲಾಗಿದೆ. ಈಕೆ 2003-04ರ ಅವಧಿಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವೇಳೆಯಲ್ಲಿ  ಲೈಂಗಿಕ ಕಿರುಕುಳ ವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಆರಂಭದಲ್ಲಿ ಈ ಪೋಸ್ಟ್ ನ್ನು ಎಲ್ಲರೂ ನೋಡಬಹುದಾಗಿತ್ತು. ಆದರೆ. ಈಗ ಇದು ಕಾಣಿಸುತ್ತಿಲ್ಲ. ಈಗ ಅಯ್ಯಪ್ಫ ಧರ್ಮ ಸೇನಾ  ಅಧ್ಯಕ್ಷರಾಗಿರುವ ಈಶ್ವರ್,  ತನ್ನೊಂದಿಗೆ ಅನುಚಿತವಾಗಿ ವರ್ತಿಸಿ  ಚುಂಬಿಸಲು ಯತ್ನಿಸಿದ್ದರು ಎಂದು ಆರೋಪಿಸಲಾಗಿತ್ತು.

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಪ್ರಚೋದನಾಕಾರಿ ಹೇಳಿಕೆ ಹಿನ್ನೆಲೆಯಲ್ಲಿ ರಾಹುಲ್ ಈಶ್ವರನ್ನು ಬಂಧಿಸಿ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿತ್ತು. ನಂತರ ಪ್ರತಿಕ್ರಿಯಿಸಿದ ರಾಹುಲ್ ಇದು, ದುಷ್ಕರ್ಮಿಗಳು ನಡೆಸಿರುವ ಷಡ್ಯಂತ್ರ ಎಂದು ಹೇಳಿಕೆ ನೀಡಿದ್ದರು.

ಇಂತಹ ಆರೋಪಗಳು #MeToo ಅಭಿಯಾನದ ವಿಶ್ವಾಸಾರ್ಹತೆಯನ್ನು ಹಾಳು ಮಾಡುತ್ತವೆ ಎಂದು ಅವರು ಇಂದು ತಮ್ಮ ಫೇಸ್ ಬುಕ್ ನಲ್ಲಿ ಹಾಕಿರುವ ವಿಡಿಯೋದಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com